ಬೆಂಗಳೂರು, ಮಾ 29 (DaijiworldNews/HR): ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಸ್ತೆ ಪಕ್ಕದಲ್ಲೇ ಮಲಗಿದ್ದ ಏಳು ವರ್ಷದ ಬಾಲಕಿ ಮೇಲೆ ಟೆಂಪೋ ಹರಿದು ಆಕೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಬಾಲಕಿಯನ್ನು ತಮಿಳುನಾಡು ಮೂಲದ ಶಿವನ್ಯ ಎಂದು ಗುರುತಿಸಲಾಗಿದೆ.
ಬಾಲಕಿ ಕುಟುಂಬ ಹಕ್ಕಿಪಿಕ್ಕಿ ಜನಾಂಗದವರಾಗಿದ್ದು, ಕಿವಿಯೋಲೆ, ಸರ ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು
ಇನ್ನು ಹುಸ್ಕೂರು ಜಾತ್ರೆ ಬಂದಿದ್ದ ಇವರು, ಊರಿಗೆ ಹಿಂದಿರುಗಲು ಬಸ್ ಸಿಗದೇ ಮಾರ್ಕೆಟ್ಗೆ ಬಂದಿದ್ದರು. ರಾತ್ರಿ ಬಸ್ ಸಿಗದೇ ತೆಂಗಿನಕಾಯಿ ಮಂಡಿ ಬಳಿಯೇ ಮಕ್ಕಳ ಸಮೇತ ಮಹಿಳೆಯರು ಮಲಗಿದ್ದರು. ಈ ವೇಳೆ ಬೊಲೋರೋ ಟೆಂಪೋದಲ್ಲಿ ಹೂ ಹಾಕಿಕೊಂಡು ಬಂದಿದ್ದ ಚಾಲಕ ಅನ್ಲೋಡ್ ಮಾಡಿ ಹೊರಡಲು ಮುಂದಾಗಿದ್ದ. ಆಗ ರಸ್ತೆ ಬದಿಯಲ್ಲಿ ಮಲಗಿದ್ದನ್ನು ಗಮನಿಸಿದೆ ಟೆಂಪೋ ರಿವರ್ಸ್ ಮಾಡುವಾಗ ಬಾಲಕಿ ಮೇಲೆ ಹತ್ತಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಳು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬಾಲಕಿ ಸಾವನ್ನಪ್ಪಿದ್ದಾಳೆ.