ಮೈಸೂರು, ಮಾ 29 (DaijiworldNews/HR): ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ಗೆ ಅವರಿಗೆ ಸೇರಿದ ಹೋಟೆಲ್ ಅನ್ನು ಅವಧಿಗೂ ಮುನ್ನವೇ ಖಾಲಿ ಮಾಡುವಂತೆ ಧಮ್ಕಿ ಹಾಕಿ, ಹೋಟೆಲ್ ಜಾಗ ಗುತ್ತಿಗೆಗೆ ನೀಡಿದ್ದ ಮಾಲೀಕ ಮಹಿಳೆ ಮೇಲೆ ದೌರ್ಜನ್ಯ ನಡೆಸಿರುವ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಸಯ್ಯದ್ ರಿಯಾಜ್ ವಿರುದ್ಧ ಕೃತಿಕಾ ಎಂ. ಗೌಡ ಎಂಬುವರು ಆರೋಪ ಮಾಡಿದ್ದಾರೆ.
ರೆಸ್ಟೋರೆಂಟ್ ಕೃತಿಕಾ ಗುತ್ತಿಗೆ ಪಡೆದಿದ್ದು, ಈ ಜಾಗ ನಲಪಾಡ್ಗೆ ಅವರಿಗೆ ಸೇರಿದ್ದು, ನಲಪಾಡ್ರಿಂದ ಆರೋಪಿ ಸಯ್ಯದ್ ರಿಯಾಜ್ ಲೀಸ್ ಪಡೆದಿದ್ದನು. ಆದರೆ ರಿಯಾಜ್ 20 ಲಕ್ಷ ರೂ. ಪಡೆದು 3 ವರ್ಷಕ್ಕೆ ಕೃತಿಕಾಗೆ ಲೀಸ್ ನೀಡಿದ್ದಾನೆ. ಇನ್ನು ಎರಡು ವರ್ಷ ಬಾಕಿ ಇದ್ದರು ಖಾಲಿ ಮಾಡುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.