ಶಿವಮೊಗ್ಗ, ಮಾ 29 (DaijiworldNews/DB): ಸಾಗರ ತಾಲೂಕಿನ ವೈದ್ಯಾಧಿಕಾರಿ ಡಾ. ಶರ್ಮ ಅವರ ಮೃತದೇಹ ಇಲ್ಲಿನ ಗಣಪತಿ ಕೆರೆಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಶಂಕೆ ಮೂಡಿದೆ.
ಘಟನೆ ಬಗ್ಗೆ ಮೃತ ಶರ್ಮ ಅವರ ತಂದೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಡಾ. ಶರ್ಮ ಸಾಗರದಲ್ಲಿ ತಾಲೂಕು ಸಹಾಯಕ ವೈದ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲದೆ, ರಾಷ್ಟ್ರೀಯ ಲಸಿಕಾ ಸುರಕ್ಷತಾ ಅಭಿಯಾನದ ಅಧಿಕಾರಿಯಾಗಿಯೂ ಕಾರ್ಯ ನಿಭಾಯಿಸುತ್ತಿದ್ದರು. ತಾಲೂಕಿನಲ್ಲಿ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಕೊರೊನಾ ಅವಧಿಯಲ್ಲಿನಿರಂತರವಾಗಿ ಕೆಲಸ ಮಾಡಿ ಪ್ರಾಮಾಣಿಕ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಅವರ ಮೃತದೇಹ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ.
ಮೃತ ಶರ್ಮ ಅವರ ಪತಿ ಸಾಗರ ತಾಲೂಕಿನ ಭೀಮನಕೋಣೆ ಗ್ರಾಮ ಪಂಚಾಯತ್ ಪಿಡಿಒ ಆಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.