ನವದೆಹಲಿ, ಮಾ 29 (DaijiworldNews/MS): 2018ರಲ್ಲಿ ಸಹೋದ್ಯೋಗಿ ಅಥರ್ ಖಾನ್ ಅವರನ್ನು ವಿವಾಹವಾಗಿ ಕಳೆದ ವರ್ಷವಷ್ಟೇ ವಿಚ್ಛೇದನ ನೀಡಿದ್ದ 2015ರ ಐಎಎಸ್ ಟಾಪರ್ ಟೀನಾ ದಾಬಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ೨ ನೇ ವಿವಾಹಕ್ಕೆ ಮುಂದಾಗಿರುವ ಅವರು 2013 ರ ಕೇಡರ್ ನ ಪ್ರದೀಪ್ ಗವಾಂಡೆ ಅವರನ್ನು ವರಿಸಲಿದ್ದಾರೆ.
2015 ರಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ದಾಬಿ 2015 ರ ಐಎಎಸ್ ಪರೀಕ್ಷೆಗಳಲ್ಲಿ ಎರಡನೇ ಸ್ಥಾನ ಪಡೆದ ಅಥರ್ ಅಮೀರ್ ಉಲ್ ಶಫಿ ಖಾನ್ ಅವರೊಂದಿಗೆ ವಿವಾಹ ಜೀವನಕ್ಕೆ ಕಾಲಿರಿಸಿದ್ದರು. ಆದರೆ 2021ರಲ್ಲಿ ದಂಪತಿಗಳು ವಿಚ್ಛೇದನ ಪಡೆದಿದ್ದರು.
ಪ್ರದೀಪ್ ಗವಾಂಡೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಟೀನಾ ಸಾಮಾಜಿಕ ಜಾಲತಾಣ ಇನ್ಸ್ಟಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೀವು ನನಗೆ ನೀಡಿದ ಸ್ಮೈಲ್ ಅನ್ನು ನಾನು ಧರಿಸಿದ್ದೇನೆ #ನಿಶ್ಚಿತ ವರ ಎಂದು ಬರೆದುಕೊಂಡಿದ್ದಾರೆ. ಇನ್ಸ್ಟಾದಲ್ಲಿ ಇವರು 1.4 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಹೊಂದಿದ್ದು, ಭಾರಿ ಜನಪ್ರಿಯತೆ ಪಡೆದಿದ್ದಾರೆ. ಪ್ರದೀಪ ಗಾವಂಡೆ ಅವರಿಗೂ ಇದು ಎರಡನೇ ಮದುವೆ. ಐಎಎಸ್ ಆಗುವ ಮೊದಲು ಅವರು ವೈದ್ಯರಾಗಿದ್ದರು.
ಇನ್ನು ಟೀನಾ ದಾಬಿಯವರ ಮಾಜಿ ಪತಿ ಅಥರ್ ಖಾನ್ 2016 ರ UPSC ಪರೀಕ್ಷೆಯಲ್ಲಿ ಎರಡನೇ ಟಾಪರ್ ಆಗಿದ್ದರು ಎಂಬುದು ಉಲ್ಲೇಖನೀಯ. ಟೀನಾ ದಾಬಿ ಮತ್ತು ಅಥರ್ ಖಾನ್ ಇಬ್ಬರೂ ತರಬೇತಿ ಸಮಯದಲ್ಲಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. 2018 ರಲ್ಲಿ ನಡೆದ, ಅವರಿಬ್ಬರ ವಿವಾಹವು ಬಹಳಷ್ಟು ಸುದ್ದಿ ಮಾಡಿತ್ತು.