ನವದೆಹಲಿ, ಮಾ 29 (DaijiworldNews/HR): ದೇಶದಾದ್ಯಂತ ಏಪ್ರಿಲ್ 6 ರಿಂದ 14ರವರೆಗೆ ಸಾಮಾಜಿಕ ಸಾಮರಸ್ಯ ನ್ಯಾಯ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಏಪ್ರಿಲ್ 6ರಿಂದ 14ರವರೆಗೆ ಸಾಮಾಜಿಕ ಸಾಮರಸ್ಯ ನ್ಯಾಯ ದಿನವನ್ನಾಗಿ ಆಚರಿಸಲಾಗುವುದು, ಏಪ್ರಿಲ್ 14 ರಂದು ಭಾರತದ ಮಾಜಿ ಪ್ರಧಾನಮಂತ್ರಿಗಳ ಮ್ಯೂಸಿಯಂನ್ನು ಉದ್ಘಾಟಿಸಲಾಗುವುದು ಎಂದರು.
ಇನ್ನು ಈ ಮ್ಯೂಸಿಯಂ ತೀನ್ ಮೂರ್ತಿ ಭವನ್ದಲ್ಲಿ ನಿರ್ಮಾಣವಾಗಿದ್ದು, ಮಾಜಿ ಪ್ರಧಾನಮಂತ್ರಿಗಳಿಗೆ ಸಂಬಂಧಪಟ್ಟ ಮಹತ್ವದ ವಿಚಾರಗಳ ಸಂಗ್ರಹವಾಗಿದೆ. ನಾವು ಯಾರ ಬಗ್ಗೆಯೂ ತಾರತಮ್ಯ ಮಾಡುವುದಿಲ್ಲ ಎಂದಿದ್ದಾರೆ.