ಬೆಂಗಳೂರು, ಮಾ 29 (DaijiworldNews/HR): ದೇಶದ ಇತಿಹಾಸವನ್ನು ಹೊಸದಾಗಿ ಸೇರಿಸಲು, ತಿರುಚಲು ಸಾಧ್ಯವಿಲ್ಲ. ನಮ್ಮ ದೇಶದ ಇತಿಹಾಸದ ಜತೆ ಟಿಪ್ಪು ಹೆಸರು ಸೇರಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪಠ್ಯ ಪುಸ್ತಕಗಳಿಂದ ಟಿಪ್ಪು ಹೆಸರನ್ನು ಕೈ ಬಿಡುವ ವಿಚಾರದ ಕುರಿತು ಮಾತನಾಡಿದ ಅವರು, ಈ ಹಿಂದೆ ರಾಷ್ಟ್ರಪತಿ, ರಾಜ್ಯಪಾಲರು ಟಿಪ್ಪು ಅವರನ್ನು ಹೊಗಳಿದ್ದರು. ಅಬ್ದುಲ್ ಕಲಾಂ ಕೂಡ ಟಿಪ್ಪು ಬಗ್ಗೆ ಮಾತನಾಡಿದ್ದರು. ಟಿಪ್ಪು ಈ ದೇಶದ ಇತಿಹಾಸದಲ್ಲಿ ಬೆರೆತಿರುವಾಗ ನಾವು ಯಾವುದೇ ಆತುರದ ನಿರ್ಧಾರವನ್ನು ಕೈಗೊಂಡು ಬದಲಿಸಲು ಆಗದು ಎಂದರು.
ಇನ್ನು ಪಠ್ಯ ಕ್ರಮದಿಂದ ಟಿಪ್ಪು ಹೆಸರು ಕೈಬಿಡುವ ವಿಚಾರವಾಗಿ ಈಗಾಗಲೇ ಸರ್ಕಾರ ಸಮಿತಿ ರಚಿಸಿದ್ದು, ಸಮಿತಿಯಲ್ಲಿ ತಜ್ಞರಿದ್ದಾರೆ. ಪ್ರಾಜ್ಞರಿದ್ದಾರೆ ಹೀಗಾಗಿ ನಾವು ಈ ವಿಚಾರದ ಬಗ್ಗೆ ಮಾತನಾಡುವುದು ಬೇಡ ಎಂದು ಹೇಳಿದ್ದಾರೆ.