ಚಂಡೀಗಢ, ಮಾ. 28 (DaijiworldNews/SM): ಪಂಜಾಬ್ನಲ್ಲಿ ಆಪ್ ಬೆಂಬಲಿಸಿದ ಜನತೆಗೆ ಸರಕಾರ ಕೂಡ ಪೂರಕ ಯೋಜನೆಗಳನ್ನೇ ಜಾರಿಗೆ ತರಲು ಮುಂದಾಗಿದೆ. ಇದೀಗ ಬಡವರ ಮನೆ ಬಾಗಿಲಿಗೆ ರೇಷನ್ ಪೂರೈಸುವ ಮಹತ್ವಾಕಾಂಕ್ಷೆಯ ನಿರ್ಣಯಕ್ಕೆ ಸರಕಾರ ಮುಂದಾಗಿದೆ.
ಪ್ರಚಂಡ ಬಹುಮತದ ಬಳಿಕ ಅಧಿಕಾರಕ್ಕೇರಿದ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದ್ದಾರೆ. ಬಡವರ ಸಂಕಷ್ಟ ಹಾಗೂ ಹಸಿವು ನೀಗಿಸುವ ನಿಟ್ಟಿನಲ್ಲಿ ಪಡಿತರ ಮನೆ ಬಾಗಿಲಿಗೆ ವಿತರಿಸುವ ನಿರ್ಧಾರಕ್ಕೆ ಸರಕಾರ ಬಂದಿದೆ. ಪಡಿತರವನ್ನು ವಿತರಿಸುವುದಕ್ಕೆ ಸಂಬಂಧಿಸಿದಂತೆ ನಮ್ಮ ಅಧಿಕಾರಿಗಳೇ ನಿಮಗೆ ಕರೆ ಮಾಡುತ್ತಾರೆ, ನೀವು ಹೇಳಿದ ಸಮಯಕ್ಕೆ ಪಡಿತರವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ," ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
ಇತ್ತೀಚಿಗಷ್ಟೇ ಪಂಜಾಬ್ ನ ಶಾಸಕರಿಗೆ ಸರಕಾರ ಒಂದೇ ಪಿಂಚಣಿಯನ್ನು ಜಾರಿಗೆ ತಂದಿತ್ತು. ಇದೀಗ ಮತ್ತೊಂದು ಹೊಸ ಯೋಜನೆ ಜಾರಿಗೆ ತಂದಿದೆ.