ರಾಜ್ ಕೋಟ್, ಮಾ 28 (DaijiworldNews/MS): ಷೇರು ಮಾರುಕಟ್ಟೆಯಲ್ಲಿ 60 ಲಕ್ಷ ರೂಪಾಯಿ ಕಳೆದುಕೊಂಡ ಬಳಿಕ 25 ವರ್ಷದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ರಾಜ್ಕೋಟ್ನ ಮೊರ್ಬಿ ರಸ್ತೆಯ ನಿವಾಸಿ 25 ವರ್ಷದ ರೋಹಿತ್ ರೈಯಾನಿ ಎಂದು ಗುರುತಿಸಲಾಗಿದೆ. ಮೃತ ಯುವಕನ ತಂದೆ ಗೋರ್ದನ್ಭಾಯ್ ಪುತ್ರನನ್ನು ಊಟಕ್ಕೆ ಕರೆಯಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.
"ರೋಹಿತ್ನ ತಂದೆಯೂ ರೋಹಿತ್ನ ಮದುವೆಗಾಗಿ 80 ಲಕ್ಷ ರೂಪಾಯಿಗೆ ತಮ್ಮ ಹಳ್ಳಿಯಲ್ಲಿನ ತನ್ನ ಜಮೀನನ್ನು ಮಾರಿದ್ದರು. ರೋಹಿತ್ ಹೆಚ್ಚಿನ ಆದಾಯವನ್ನು ನಿರೀಕ್ಷಿಸಿ ಷೇರು ಮಾರುಕಟ್ಟೆಯಲ್ಲಿ ಮನೆಯವರಿಗೆ ತಿಳಿಯದಂತೆ ರಹಸ್ಯವಾಗಿ ರೂ 60 ಲಕ್ಷ ಹೂಡಿಕೆ ಮಾಡಿದ್ದರು. ಆದರೆ ಎಲ್ಲಾ ಹಣವನ್ನು ಕಳೆದುಕೊಂಡಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.