ಬೆಂಗಳೂರು, ಮಾ 28 (DaijiworldNews/MS): "ಕಾಂಗ್ರೆಸ್ ಪಕ್ಷದ ಪ್ರಮುಖ ಜವಾಬ್ದಾರಿಗಳು ಹಿಂದುತ್ವದ ವಿರುದ್ಧ ನಿಂತವರಿಗೆ ಮಾತ್ರ, ಹಿಂದೂಗಳ ದೌರ್ಭಾಗ್ಯವಿದು" ಎಂದು ಬಿಜೆಪಿ ಪಕ್ಷವೂ ಕಾಂಗ್ರೆಸ್ ವಿರುದ್ದ ಕಿಡಿಕಾರಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ " ವೀರಶೈವ - ಲಿಂಗಾಯತ ಪ್ರತ್ಯೇಕ ಧರ್ಮ ವಿಭಜನೆಯ ವಿಫಲ ಯತ್ನದ ಸಮಯದಲ್ಲಿ ಎಂ.ಬಿ ಪಾಟೀಲ್ ನಾಡಿನ ಹಲವಾರು ಸ್ವಾಮೀಜಿಗಳ ಬಗ್ಗೆ ಅಗೌರವಯುತವಾಗಿ ನಡೆದುಕೊಂಡರು. ಅಂದು ಅವರ ಬೆನ್ನಿಗೆ ನಿಂತಿದ್ದ ಸಿದ್ದರಾಮಯ್ಯ ಈಗ ಮಠಾಧೀಶರ ವಿರುದ್ಧ ಹೇಳಿಕೆ ನೀಡುತ್ತಲೇ ಎಂಬಿಪಾ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಹಿಂದೂ ವಿರೋದಿ ಕಾಂಗ್ರೆಸ್ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಒಂದು ವಿಚಾರ ಸ್ಪಷ್ಟಪಡಿಸುವಿರಾ?ಹಿಂದೂ ಸಮಾಜದ ವಿಭಜನೆಗಾಗಿ ನೀವು ನಡೆಸಿದ ವಿಫಲ ಯತ್ನದ ಬಗ್ಗೆ ನಾಡಿನ ಜನತೆಯ ಕ್ಷಮೆ ಕೇಳುತ್ತೀರೋ ಅಥವಾ ನಿಮ್ಮ ಹಿಡನ್ ಅಜೆಂಡಾ ಜಾರಿಗಾಗಿ ಈ ಬಾರಿಯೂ ಯತ್ನಿಸುತ್ತೀರೋ? ಈ ಬಾರಿ ನಿಮ್ಮ ಪ್ರಚಾರದ ಸರಕೇನು? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷದ ಪ್ರಮುಖ ಜವಾಬ್ದಾರಿಗಳು ಹಿಂದುತ್ವದ ವಿರುದ್ಧ ನಿಂತವರಿಗೆ ಮಾತ್ರ!2018 ರ ಚುನಾವಣಾ ಸಮಯದಲ್ಲಿ ವೀರಶೈವ-ಲಿಂಗಾಯಿತ ಪ್ರತ್ಯೇಕ ಧರ್ಮದ ರೂವಾರಿಯಾಗಿ ಸಮಾಜ ವಿಭಜನೆಯ ಮುಂದಾಳತ್ವ ವಹಿಸಿದ್ದ ಎಂ.ಬಿ ಪಾಟೀಲ್ ಅವರಿಗೆ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹಿಂದೂಗಳ ದೌರ್ಭಾಗ್ಯವಿದು! ಎಂದು ಲೇವಡಿ ಮಾಡಿದೆ.