ಕೋಲ್ಕತ್ತಾ, ಮಾ 28 (DaijiworldNews/MS): ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿದ ಪರಿಣಾಮ ಆಸ್ಪತ್ರೆಯಲ್ಲಿಅಪ್ರಾಪ್ತ ಬಾಲಕಿಯೋರ್ವಳು ಜೀವನ್ಮರಣದ ಹೋರಾಟ ನಡೆಸುತ್ತಿರುವ ಘಟನೆ ಕೋಲ್ಕತ್ತಾದ ಉತ್ತರ 24 ಪರಗಣ ಜಿಲ್ಲೆಯ ಬಸಿರ್ಹತ್ ಉಪವಿಭಾಗದಲ್ಲಿ ನಡೆದಿದೆ.
೧೧ರ ಹರೆಯದ ಅಪ್ರಾಪ್ತ ಬಾಲಕಿ ಮೇಲೆ ಗುರುವಾರ ರಾತ್ರಿ ಯುವಕನೋರ್ವ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿದ್ದು, ಮೀನುಗಾರಿಕಾ ಪ್ರದೇಶದ ಬಳಿಯಿಂದ ಸ್ಥಳೀಯ ಗ್ರಾಮಸ್ಥರು ಬಾಲಕಿಯನ್ನು ರಕ್ಷಿಸಿದ್ದಾರೆ.
" ಬಾಲಕಿ ಪತ್ತೆಯಾದಾಗ ತೀವ್ರ ರಕ್ತಸ್ರಾವವಾಗಿತ್ತು. ಆರೋಪಿ ಆಕೆಯ ಮೇಲೆ ಅತ್ಯಾಚಾರ ಮಾಡಿರುವುದು ಮಾತ್ರವಲ್ಲದೆ ಆಕೆಯ ಖಾಸಗಿ ಭಾಗಗಳಿಗೆ ಕೋಲಿನಿಂದ ಹಾನಿಗೊಳಿಸಿ ಚಿತ್ರಹಿಂಸೆ ನೀಡಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಆಕೆಯನ್ನು ಬಸಿರ್ಹತ್ನಲ್ಲಿರುವ ಆಸ್ಪತ್ರೆ ಕರೆದೊಯ್ದ ಸಂತ್ರಸ್ತೆ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗೆ ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿದೆ ಅಲ್ಲಿ ಐದು ವೈದ್ಯರ ಸಮಿತಿಯು ಅವಳ ಚಿಕಿತ್ಸೆಯ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶುಕ್ರವಾರ ಪೊಲೀಸರು ಬಾಲಕಿಯ ಸೋದರಸಂಬಂಧಿಕಳನ್ನು ಮತ್ತು ಆಕೆಯ ಬಾಯ್ ಪ್ರೆಂಡ್ ನನ್ನು ಬಂಧಿಸಿದ್ದಾರೆ. ಆರೋಪಿ ಯುವಕ ತನ್ನ ಗೆಳತಿಗೆ, ಆಕೆಯ ಸಹೋದರಿಯನ್ನು ರಾತ್ರಿ ತನ್ನೊಂದಿಗೆ ಬಿಟ್ಟರೆ ಹೊಸ ಮೊಬೈಲ್ ಫೋನ್ ಮತ್ತು ಸ್ವಲ್ಪ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದನು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಅಪ್ರಾಪ್ತ ಬಾಲಕಿ ಮೇಲೆ ಕ್ರೌರ್ಯ ಎಸಗಿದ ನಂತರ ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಮೀನುಗಾರಿಕಾ ಪ್ರದೇಶದಲ್ಲಿ ಆಕೆಯನ್ನು ಎಸೆದು ಪರಾರಿಯಾಗಿದ್ದ. ಅಪ್ರಾಪ್ತ ಬಾಲಕಿ ಮನೆಗೆ ಬಾರದಿದ್ದಾಗ ಮನೆಯವರು ಪೊಲೀಸರನ್ನು ಸಂಪರ್ಕಿಸಿದಾಗ ವಿಚಾರ ಬೆಳಕಿಗೆ ಬಂದಿದೆ. ಹೌರಾ ಜಿಲ್ಲೆಯ ಡೊಮ್ಜೂರ್ನಲ್ಲಿ ಆರೋಪಿ ಯುವಕನನ್ನು ಬಂಧಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.