ಮಂಡ್ಯ, ಮಾ 28 (DaijiworldNews/HR): ಸುಮಲತಾ ಅವರು ಸಂಸದರಾಗಿ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ? ಅವರು ಬೇರೆಯವರನ್ನು ದೂರುವ ಬದಲು ಸಂಸದರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸುಮಲತಾ ಅವರು ಸಂಸದರಾಗಿ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಪ್ರಶ್ನೆ ಮಾಡಿಕೊಳ್ಳಲಿ. ಮಂಡ್ಯದ ಶಾಸಕರು ಮೂರ್ನಾಲ್ಕು ಬಾರಿ ಆಯ್ಕೆ ಆಗಿದ್ದಾರೆ. ಅಭಿವೃದ್ಧಿ ಆಗಿಲ್ಲ ಅಂದರೆ ಜನರು ಶಾಸಕರನ್ನು ಪ್ರಶ್ನಿಸುತ್ತಾರೆ. 2024ರವರೆಗೂ ಸಂಸದೆ ಸುಮಲತಾ ಅವರಿಗೆ ಅಧಿಕಾರ ಇದೆ. ಜನರ ಜೊತೆ ನಿಂತು ಕೆಲಸ ಮಾಡಲಿ ಎಂದರು.
ಇನ್ನು ಅನುಕಂಪ ಗಿಟ್ಟಿಸುವ ತಂತ್ರಗಳು ಯಾವಾಗಲೂ ಫಲ ಕೊಡುವುದಿಲ್ಲ ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾದರೆ ಜನರು ಶಾಸಕರನ್ನು ಹೊಣೆಯಾಗಿಸಿ ಪ್ರಶ್ನಿಸುತ್ತಾರೆ. ಯಾರೋ ಏನೋ ಹೇಳಿದರು ಎಂದು ದೂರುವ ಮೂಲಕ ಅನುಕಂಪ ಗಿಟ್ಟಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.