ಪಾಟ್ನಾ, ಮಾ 28 (DaijiworldNews/HR): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೀನುಗಾರಿಕೆ ಮತ್ತು ಪಶುಸಂಗೋಪನಾ ಸಚಿವ ಮುಖೇಶ್ ಸಹಾನಿ ಅವರನ್ನು ತಮ್ಮ ಸಂಪುಟದಿಂದ ವಜಾ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮುಖೇಶ್ ಸಹಾನಿ ಅವರು ವಿಕಾಸಶೀಲ್ ಇನ್ಸಾನ್ ಪಕ್ಷದ ಸ್ಥಾಪಕ ಮುಖ್ಯಸ್ಥರಾಗಿದ್ದು, ಇನ್ನು ಮುಂದೆ ಎನ್ಡಿಎ ಭಾಗವಾಗಿಲ್ಲ ಎಂದು ವಾದಿಸಿದ ಮಿತ್ರಪಕ್ಷ ಬಿಜೆಪಿಯಿಂದ ಲಿಖಿತ ಸಲ್ಲಿಕೆಯಾದ ನಂತರ ಈ ವಜಾಗೊಳಿಸಿದ ಶಿಫಾರಸನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಇನ್ನು ಮುಖೇಶ್ ಸಹಾನಿ ಅವರು ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದು, ಬಿಜೆಪಿ ನಿರ್ದೇಶನದನ್ವಯ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಲಾಗಿತ್ತು. ಬಳಿಕ ಸಂಪುಟಕ್ಕೆ ಸೇರಿಸಲಾಗಿತ್ತು.
ನಿತೀಶ್ ಕುಮಾರ್ ಸಂಪುಟದಲ್ಲಿ ಮುಖೇಶ್ ಸಹಾನಿ ಮೀನುಗಾರಿಕೆ ಮತ್ತು ಪಶುಸಂಗೋಪನಾ ಸಚಿವರಾಗಿದ್ದರು.