ದೆಹಲಿ, ಮಾ 28 (DaijiworldNews/HR): ಇಂದು ಭಾರತಕ್ಕೆ ಫ್ರೆಂಚ್ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಪಿಯರೆ ವಾಂಡಿಯರ್ ಅವರು ಭೇಟಿ ನೀಡುತ್ತಿದ್ದು, ಮೂರು ದಿನಗಳ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.
ಅಡ್ಮಿರಲ್ ವಾಂಡಿಯರ್ ಅವರು ತಮ್ಮ ಭಾರತೀಯ ಸಹವರ್ತಿ ಅಡ್ಮಿರಲ್ ಆರ್ ಹರಿ ಕುಮಾರ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಇನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಪ್ಯಾರಿಸ್ಗೆ ಪ್ರಯಾಣಿಸಿದ ಒಂದು ತಿಂಗಳ ನಂತರ ಫ್ರೆಂಚ್ ನೌಕಾಪಡೆಯ ಮುಖ್ಯಸ್ಥರು ಭಾರತಕ್ಕೆ ಭೇಟಿ ನೀಡುತಿದ್ದಾರೆ.