ಮೈಸೂರು, ಮಾ 27 (DaijiworldNews/HR): ಕರ್ನಾಟಕದಲ್ಲಿ ಹಿಜಾಬ್ ವಿವಾದ ಸೃಷ್ಟಿಸಿದ್ದೇ ಕಾಂಗ್ರೆಸ್ ಪಕ್ಷ. ರಾಜ್ಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹಿಜಾಬ್ ವಿವಾದ ಸೃಷ್ಟಿಸಿದೆ ಎಂದು ಸಚಿವ ನಾರಾಯಣಗೌಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎಲ್ಲಾ ವಿಚಾರದಲ್ಲೂ ರಾಜಕೀಯ ಲಾಭ ಪಡೆಯಲು ಹೋಗುತ್ತಿದ್ದಾರೆ. ಧಾರ್ಮಿಕ ಕೇಂದ್ರಗಳ ಬಳಿ ವ್ಯಾಪಾರ ನಿಷೇಧ ವಿಚಾರ ಬಂದಿರುವುದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಈ ನಿಯಮ ಬಂದಿರುವುದು. ನಾವು ಹೊಸದಾಗಿ ಯಾವುದನ್ನು ಮಾಡಿಲ್ಲ ಎಂದರು.
ಇನ್ನು ಸಿದ್ದರಾಮಯ್ಯನವರು ರಾಜಕೀಯ ಮಾಡಲು ಈ ರೀತಿ ಮಾತನಾಡುತ್ತಾರೆ. ಇದನ್ನೆಲ್ಲಾ ಬಿಡಬೇಕು, ಅನವಶ್ಯಕವಾದ ಮಾತುಗಳಿಂದ ಯಾವುದೇ ಲಾಭವಿಲ್ಲ. ವೋಟ್ ಬ್ಯಾಂಕ್ಗಾಗಿ ಈ ರೀತಿ ವಿವಾದಗಳನ್ನು ಕಾಂಗ್ರೆಸ್ ನವರು ಸೃಷ್ಟಿ ಮಾಡುತ್ತಾರೆ ಎಂದು ಹೇಳಿದ್ದಾರೆ.