ನವದೆಹಲಿ, ಮಾ 27 (DaijiworldNews/DB): ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿದ ಹೆಣ್ಣು ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಕೇಂದ್ರ ಸರ್ಕಾರ 'ಕನ್ಯಾ ಶಿಕ್ಷಾ ಪ್ರವೇಶ ಉತ್ಸವ'ವನ್ನು ಪ್ರಾರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ನಲ್ಲಿ ಹೇಳಿದ್ದಾರೆ.
ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರಲ್ಲಿ ಅನಕ್ಷರತೆ ಮತ್ತು ಹೆಣ್ಣು ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮಹಿಳಾ ಸಬಲೀಕರಣ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಮಹಿಳೆಯರನ್ನು ಮುನ್ನೆಲೆಗೆ ತರುವ ಕೆಲಸಗಳು ಇನ್ನಷ್ಟು ಆಗಬೇಕಿದೆ. ಕನ್ಯಾ ಶಿಕ್ಷಾ ಪ್ರವೇಶ ಉತ್ಸವದ ಮೂಲಕ ಹೆಣ್ಣು ಮಕ್ಕಳು ಮರಳಿ ಶಾಲೆಗೆ ಬರಲಿದ್ದಾರೆ ಎಂದರು.
ಭಾರತ 400 ಶತಕೋಟಿ ಡಾಲರ್ಗೂ ಹೆಚ್ಚು ರಫ್ತು ಮಾಡುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಮೇಡ್ ಇನ್ ಇಂಡಿಯಾ ಉತ್ಪನ್ನಗಳು ವಿದೇಶೀ ಮಾರುಕಟ್ಟೆಯಲ್ಲಿ ಹೆಚ್ಚು ಕಾಣಸಿಗುತ್ತಿರುವುದು ನಮ್ಮ ದೇಶದ ಹೆಮ್ಮೆ. ಹಲವಾರು ಸ್ಟಾರ್ಟ್ ಅಪ್ ಗಳು, ಉದ್ಯಮಗಳು ಯಶಸ್ಸು ಕಾಣುತ್ತಿವೆ. ದೇಶದ ರೈತರು, ಯುವಕರು, ಎಂಎಸ್ ಎಂಇಗಳ ನಿರಂತರ ಶ್ರಮವೇ ಇದಕ್ಕೆಲ್ಲ ಕಾರಣ ಎಂದು ಅವರು ಶ್ಲಾಘಿಸಿದರು.