ನವದೆಹಲಿ, ಮಾ 27 (DaijiworldNews/DB): ಆಗಸದ ಗುರಿಗಳನ್ನು ಭೂಮಿಯಿಂದಲೇ ಹೊಡೆದುರುಳಿಸಬಲ್ಲ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.
ಒಡಿಶಾದ ಬಾಲಸೋರ್ ಕರಾವಳಿಯಲ್ಲಿ ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ಈ ಪರೀಕ್ಷಾರ್ಥ ಉಡಾವಣೆ ನಡೆಯಿತು.
ಭೂಮಿಯಿಂದ ಆಕಾಶದ ಗುರಿಗಳನ್ನು ಈ ಕ್ಷಿಪಣಿ ಛಿದ್ರ ಪಡಿಸಿದೆ. ಭಾರತೀಯ ಸೇನೆಯ ಭಾಗವಾಗಿ ಈ ಕ್ಷಿಪಣಿಯನ್ನು ತಯಾರಿಸಲಾಗಿದೆ. ಭೂಮಿಯಿಂದ ಬಹಳ ದೂರದಲ್ಲಿದ್ದ ಗುರಿ ತಲುಪಿ ಅಲ್ಲಿ ನೇರ ಹೊಡೆತ ನೀಡಿದೆ. ಆ ಮೂಲಕ ಕ್ಷಿಪಣಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ ಎಂದು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್ ಡಿಒ) ಹೇಳಿದೆ.