ನವದೆಹಲಿ, ಮಾ 26 (DaijiworldNews/DB): ಕೇಂದ್ರ ಸರ್ಕಾರದ ಕಾರ್ಮಿಕ, ರೈತ ವಿರೋಧಿ, ಜನವಿರೋಧಿ ಮತ್ತು ರಾಷ್ಟ್ರವಿರೋಧಿ' ನೀತಿಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಮಾರ್ಚ್ 28ರಂದು ಬೆಳಿಗ್ಗೆ 7ರಿಂದ ಮಾರ್ಚ್ 30ರ ಬೆಳಿಗ್ಗೆ 7ರವರೆಗೆ ಮುಷ್ಕರ ನಡೆಯಲಿದೆ.
ಕೇಂದ್ರ ಸರ್ಕಾರವು ದುಡಿಯುವ ವರ್ಗದ ಮೇಲಿನ ದಾಳಿ ಹೆಚ್ಚಿಸಿದೆ. ಶೇಕಡಾ 8.5ರಷ್ಟಿದ್ದಇಪಿಎಫ್ ಸಂಗ್ರಹಣೆಯ ಮೇಲಿನ ಬಡ್ಡಿದರವನ್ನು ಶೇಕಡಾ 8.1ಕ್ಕೆ ಇಂಧನ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ಜೀವನ ಸಾಗಿಸುವುದೇ ದುಸ್ತರವಾಗಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದು ವೇದಿಕೆಯು ತಿಳಿಸಿದೆ.
ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ 2021ನ್ನು ವಿರೋಧಿಸಿ ಬ್ಯಾಂಕ್ ಒಕ್ಕೂಟಗಳು ಬಂದ್ಗೆ ಬೆಂಬಲ ನೀಡಿವೆ. ರೈಲ್ವೇ, ರಕ್ಷಣಾ ವಲಯ, ಕಲ್ಲಿದ್ದಲು, ಉಕ್ಕು, ತೈಲ, ಟೆಲಿಕಾಂ, ಅಂಚೆ, ಆದಾಯ ತೆರಿಗೆ, ತಾಮ್ರ, ವಿಮೆ ಸೇರಿದಂತೆ ವಿವಿಧ ವಲಯಗಳ ಒಕ್ಕೂಟಗಳು ಮುಷ್ಕರವನ್ನು ಬೆಂಬಲಿಸಲಿವೆ. ಸಂಯುಕ್ತ ಕಿಸಾನ್ ಮೋರ್ಚ ಕೂಡಾ ಬೆಂಬಲ ನೀಡಲಿದೆ ಎಂದು ವೇದಿಕೆ ಪ್ರಮುಖರು ಮಾಧ್ಯಮಗಳಿಗೆ ತಿಳಿಸಿದ್ದಾರೆ.