ಬೆಂಗಳೂರು, ಮಾ 26 (DaijiworldNews/HR): ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯಾದ ಸಿಎಂ ಆಫ್ ಕರ್ನಾಟಕ ಕೆಲವು ನಿಮಿಷಗಳ ಕಾಲ ಹ್ಯಾಕ್ ಆಗಿದೆ ಎಂದು ತಿಳಿದು ಬಂದಿದೆ.
ಶನಿವಾರ ಬೆಳಗ್ಗೆ 6 ಗಂಟೆಯಿಂದ 6.18 ರವರೆಗೆ 18 ನಿಮಿಷಗಳ ಕಾಲ ಟ್ವಿಟ್ಟರ್ ಖಾತೆ ಹ್ಯಾಕ್ ಹಾಗಿರುವ ಬಗ್ಗೆ ಸಿಎಂ ಟ್ವೀಟ್ ಫಾಲೋವರ್ಸ್ ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಖಾತೆ ತೆರೆದವರ ಪ್ರೊಫೈಲ್ ಸೇರಿದಂತೆ ಹಲವರನ್ನು ಟ್ಯಾಗ್ ಮಾಡಲಾಗಿದ್ದು ಅನುಮಾನಕ್ಕೆ ಕಾರಣವಾಗಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಸಿಎಂ ಕಚೇರಿಯ ಸೋಷಿಯಲ್ ಮೀಡಿಯಾ ಎಲ್ಲ ಟ್ವೀಟ್ಗಳನ್ನು ಅಳಿಸಿಹಾಕಿ ಖಾತೆಯನ್ನು ಸರಿಪಡಿಸಿದೆ ಎನ್ನಲಾಗಿದೆ.