ಬೆಂಗಳೂರು, ಮಾ 26 (DaijiworldNews/HR): ಡಿಕೆ ಶಿವಕುಮಾರ್ ಅವರಿಗೆ ಕೋರ್ಟ್ ಜಾಮೀನು ನೀಡುವ ಸಂದರ್ಭದಲ್ಲಿ ದೇಶಬಿಟ್ಟು ತೆರಳದಂತೆ ಷರತ್ತು ವಿಧಿಸಿದ್ದು, ಒಂದು ವೇಳೆ ಅನಿವಾರ್ಯ ಕಾರಣದಿಂದ ತೆರಳಬೇಕಾದರೆ ಕೋರ್ಟ್ ಅನುಮತಿಯನ್ನು ಪಡೆಯೋದು ಕಡ್ಡಾಯಗೊಳಿಸಿತ್ತು. ಹೀಗಾಗಿ ದುಬೈಗೆ ತೆರಳೋದಕ್ಕೆ ಅನುಮತಿ ಕೋರಿ ಡಿಕೆಶಿ ಸಲ್ಲಿಸಿದ್ದಂತ ಅರ್ಜಿಗೆ ಕೋರ್ಟ್ ಅನುಮತಿ ನೀಡಿದೆ.
ಡಿ ಕೆ ಶಿವಕುಮಾರ್ ಅವರು ತಮಗೆ ದುಬೈ ಎಕ್ಸ್ ಪೋನಲ್ಲಿ ಭಾಗವಹಿಸೋದಕ್ಕಾಗಿ ಕಂಪನಿಯೊಂದು ಆಹ್ವಾನ ನೀಡಲಾಗಿದ್ದು, ಅದಕ್ಕಾಗಿ ಅನುಮತಿ ನೀಡುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಎಲ್ಪಿಎಫ್ಎಲ್ಇ ಎಕ್ಸ್ ಬೇಸ್ ಇಂಡಸ್ಟ್ರೀ ಆಹ್ವಾನದ ಮೇರೆಗೆ ವಿಶೇಷ ಅತಿಥಿಯಾಗಿ ದುಬೈಗೆ ತೆರಳೋದಕ್ಕೆ ಹಾಗೂ ಪಾಸ್ ಪೋರ್ಟ್ ನವೀಕರಣಕ್ಕೂ ಅನುಮತಿ ಕೋರಿದ್ದರು.
ಇನ್ನು ಈ ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್ ಡಿಕೆ ಶಿವಕುಮಾರ್ ಪಾಸ್ ಪೋರ್ಟ್ ಅವಧಿ ಸೆಪ್ಟೆಂಬರ್ 22, 2021ರಂದು ಮುಕ್ತಾಯಗೊಂಡಿದ್ದನ್ನು ನವೀಕರಣಕ್ಕಾಗಿ ಅನುಮತಿಸಿ ದುಬೈಗೆ ತೆರಳೋದಕ್ಕು ಅವಕಾಶ ನೀಡಿದೆ.