ಛತ್ತೀಸ್ಗಢ, ಮಾ 26 (DaijiworldNews/HR): ತಂದೆಯೊಬ್ಬ ತನ್ನ ಏಳು ವರ್ಷದ ಮಗಳ ಶವವನ್ನು ಭುಜದ ಮೇಲೆ ಹೊತ್ತುಕೊಂಡು ಬರೋಬ್ಬರಿ 10 ಕಿಲೋ ಮೀಟರ್ ಹೋಗುತ್ತಿರುವ ಘಟನೆ ಸುರ್ಗುಜಾ ಜಿಲ್ಲೆಯಲ್ಲಿ ನಡೆದಿದೆ.
ಬಡತನದಿಂದ ಬಳಲುತ್ತಿದ್ದ ಕಾರಣ ಯಾವುದೇ ವಾಹನದ ವ್ಯವಸ್ಥೆ ಮಾಡಲು ಆತನಿಗೆ ಆಗಲಿಲ್ಲ. ಆಸ್ಪತ್ರೆಯಿಂದ ಕೂಡ ಆಯಂಬುಲೆನ್ಸ್ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಮಗಳ ಶವವನ್ನು ತಾನೇ ಹೊತ್ತುಕೊಂಡು ಬರೋಬ್ಬರಿ 10 ಕಿಲೋ ಮೀಟರ್ ನಡೆದಿದ್ದು, ಈ ವಿಡಿಯೋಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಈಶ್ವರ್ ದಾಸ್ ಅವರ 7 ವರ್ಷದ ಮಗಳು ಸುರೇಖಾ ಅನಾರೋಗ್ಯದಿಂದ ಬಳಲುತ್ತಿದ್ದು, ಆಕೆಯನ್ನು ಕಷ್ಟ ಪಟ್ಟು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ಆದರೆ ಚಿಕಿತ್ಸೆ ಫಲಿಸದೇ ಬಾಲಕಿ ಸುರೇಖಾ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ.
ಬಳಿಕ ತಂದೆ ಶವವನ್ನು ಅವರ ಮನೆಗೆ ಸಾಗಿಸಲು ಶವದ ವಾಹನಕ್ಕಾಗಿ ಪ್ರಯತ್ನಿಸಿದ್ದರು. ಆದರೆ ವಾಹನವು ಬರಲು ತುಂಬಾ ಸಮಯ ತೆಗೆದುಕೊಂಡಿತು. ಮತ್ತೊಂದೆಡೆ ಆಯಂಬುಲೆನ್ಸ್ ವ್ಯವಸ್ಥೆ ಮಾಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದರು ಎನ್ನಲಾಗಿದೆ.