ಸಂಬಲ್ಪುರ, ಮಾ 26 (DaijiworldNews/HR): ಎಂಟು ವರ್ಷದ ಬಾಲಕಿಯ ಶಿರಚ್ಛೇದ ಮಾಡಿ, ಕತ್ತರಿಸಿದ ತಲೆಯೊಂದಿಗೆ ಗ್ರಾಮದೆಲ್ಲೆಡೆ ಯುಬಕನೊಬ್ಬ ಅಲೆದಾಡುತ್ತಿದ್ದ ಘಟನೆ ಒಡಿಶಾದ ಜಾಜ್ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಜಮೀನಿಗೆ ತೆರಳಿದ್ದಾಗ ಕೊಡಲಿಯೊಂದಿಗೆ ಅಲ್ಲಿಗೆ ತೆರಳಿದ ಆರೋಪಿ ತಲೆ ಕಡಿದು ಹತ್ಯೆ ಮಾಡಿದ್ದು, ಮುಂಡದಿಂದ ಬೇರ್ಪಟ್ಟ ರುಂಡವನ್ನು ಹಿಡಿದುಕೊಂಡು ಊರೂರು ಅಲೆದು, ಕೊಳವೆ ಬಾವಿಯ ಬಳಿ ತೊಳೆದಿದ್ದಾನೆ ಎನ್ನಲಾಗಿದೆ.
ಇನ್ನು ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ವ್ಯಕ್ತಿಯನ್ನು ಬಂಧಿಸಿದ್ದು, ಆತ ಮದ್ಯವ್ಯಸನಿಯಾಗಿದ್ದ. ಆದರೆ ಮೃತ ಬಾಲಕಿಯ ಕುಟುಂಬದೊಂದಿಗೆ ಯಾವುದೇ ದ್ವೇಷವನ್ನು ಹೊಂದಿರಲಿಲ್ಲ. ಆರೋಪಿ ಏಕೆ ಈ ಕೃತ್ಯ ಎಸಗಿದ ಎಂಬುದನ್ನು ನಾವು ಇನ್ನಷ್ಟೇ ಪತ್ತೆಮಾಡಬೇಕಿದೆ ಎಂದು ಪೊಲೀಸ್ ಅಧಿಕಾರಿ ರಾಜಕಿಶೋರ್ ಮಿಶ್ರಾ ತಿಳಿಸಿದ್ದಾರೆ.
ಬಂಧಿತ ಆರೋಪಿಯಿಂದ ಆಯುಧವನ್ನು ವಶಪಡಿಸಿಕೊಳ್ಳಲಾಗಿದ್ದು, ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.