ಚಂಡೀಗಢ, ಮಾ. 25 (DaijiworldNews/SM): ಪಂಜಾಬ್ ನಲ್ಲಿ ಆಮ್ ಆದ್ಮಿಯ ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಸಿಎಂ ಭಗವಂತ್ ಮಾನ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶಾಸಕರಿಗೆ ಕೇವಲ ಒಂದು ಪಿಂಚಣಿ ಮಾತ್ರ ನೀಡುವ ಘೋಷಣೆ ಮಾಡಿದ್ದಾರೆ.
ಇದರ ಜೊತೆಗೆ ಶಾಸಕರ ಕುಟುಂಬ ಪಿಂಚಣಿಯನ್ನೂ ಕೂಡಾ ನೂತನ ಸಿಎಂ ಕಡಿತಗೊಳಿಸಿದ್ದಾರೆ. ಎಷ್ಟು ಬಾರಿ ಗೆದ್ದರೂ ಕೂಡಾ ಒಂದೇ ಪಿಂಚಣಿ ಎಂದು ಸ್ಪಷ್ಟಪಡಿಸಿದ್ದಾರೆ. ಶಾಸಕರು ಮತ್ತು ಮಾಜಿ ಶಾಸಕರು ಎಷ್ಟು ಬಾರಿ ಗೆದ್ದರೂ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಬಹುದು ಎಂದು ನಿರ್ಧಾರ ಕೈಗೊಳ್ಳಲಾಗಿದೆ. ಇವಿಷ್ಟೇ ಅಲ್ಲದೆ, ಶಾಸಕರ ಕುಟುಂಬಕ್ಕೆ ನೀಡುವ ಭತ್ಯೆಗೂ ಕತ್ತರಿ ಹಾಕುವ ಸಂದೇಶವನ್ನು ಮುಖ್ಯಮಂತ್ರಿ ನೀಡಿದ್ದಾರೆ. ಇದರಿಂದಾಗಿ ಸರಕಾರದ ಬೊಕ್ಕಸದಲ್ಲಿ ಲಕ್ಷಾಂತರ ಹಣ ಉಳಿತಾಯವಾಗುವ ಸಾಧ್ಯತೆ ಇದೆ.