ನವದೆಹಲಿ, ಮಾ 25 (DaijiworldNews/DB): ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರೊಬ್ಬ ಅರ್ಬನ್ ನಕ್ಸಲ್ ಎಂದು ಬಿಜೆಪಿ ಮುಖಂಡ ಅಮಿತ್ ಮಾಳವಿಯಾ ವ್ಯಂಗ್ಯವಾಡಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಒತ್ತಾಯಿಸಿದ್ದ ಬಿಜೆಪಿಗೆ ತಿರುಗೇಟು ನೀಡಿದ್ದ ಕೇಜ್ರೀವಾಲ್ ಚಿತ್ರವನ್ನು ಉಚಿತವಾಗಿ ವೀಕ್ಷಿಸಲು ಯೂಟ್ಯೂಬ್ ಗೆ ಅಪ್ ಲೋಡ್ ಮಾಡುವಂತೆ ನಿರ್ದೇಶಕರಿಗೆ ಹೇಳಿ ಎಂದಿದ್ದರು. ಇದಕ್ಕೆ ಟೀಕೆ ವ್ಯಕ್ತಪಡಸಿದ ಮಾಳವಿಯಾ ಕೇಜ್ರೀವಾಲ್ ಒಬ್ಬ ನಗರ ನಕ್ಸಲ್ ಎಂದಿದ್ದಾರೆ.
ಕೇಜ್ರೀವಾಲ್ ಅವರು 2016ರಲ್ಲಿ ’ನಿಲ್ ಬಟ್ಟೆ ಸನ್ನಾಟ’ ಮತ್ತು 2019ರಲ್ಲಿ ’ಸಾಂಡ್ ಕಿ ಆಂಕ್’ ಚಿತ್ರಗಳಿಗೆ ತೆರಿಗೆ ವಿನಾಯಿತಿ ನೀಡಿರುವುದನ್ನು ಟ್ವಿಟರ್ ನಲ್ಲಿ ಪ್ರಕಟಿಸಿರುವುದರ ಸ್ಕ್ರೀನ್ ಶಾಟ್ ತೆಗೆದು ಬಿಜೆಪಿಗರು 'ಕೇಜ್ರೀವಾಲ್ ಎಕ್ಸ್ ಪೋಸ್ ಡ್’ ಎಂಬ ಟ್ಯಾಗ್ ಲೈನ್ ನೊಂದಿಗೆ ಪರಸ್ಪರ ಹಂಚಿಕೊಳ್ಳುತ್ತಿದ್ದಾರೆ.