ನವದೆಹಲಿ, ಮಾ 25 (DaijiworldNews/DB): ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ಮುಕ್ತ ಮಾಡಿ ಎಂದು ಕೇಳುವ ಬದಲು ಚಿತ್ರವನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡುವಂತೆ ನಿರ್ದೇಶಕರನ್ನು ಕೋರಿಕೊಳ್ಳಿ ಎಂಬುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಬಿಜೆಪಿಯವರು ಈ ಚಿತ್ರಕ್ಕೆ ತೆರಿಗೆ ಮುಕ್ತ ಅವಕಾಶ ನೀಡುವಂತೆ ಮನವಿ ಮಾಡಿದ ವೇಳೆ ಸಿಎಂ ಕೇಜ್ರೀವಾಲ್ ಪ್ರತಿಕ್ರಿಯಿಸಿ, ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದರೆ ಎಲ್ಲರೂ ಉಚಿತವಾಗಿ ಚಿತ್ರ ವೀಕ್ಷಿಸಬಹುದು. ಈ ಬಗ್ಗೆ ನಿರ್ದೇಶಕರಲ್ಲಿ ಮಾತನಾಡಿ. ತೆರಿಗೆ ಮುಕ್ತಗೊಳಿಸುವುದಕ್ಕಿಂತ ಇದೇ ಅತ್ಯುತ್ತಮ ಮಾರ್ಗ ಎಂದರು.
ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೆಲವರು ಕೋಟಿಗಟ್ಟಲೆ ಸಂಪಾದನೆ ಮಾಡಿದ್ದಾರೆ. ಆದರೆ ನಿಮಗೆ ಪೋಸ್ಟರ್ಗಳನ್ನು ಹಾಕುವ ಕೆಲಸ ನೀಡಲಾಗಿದೆ. ಈ ಸತ್ಯ ಅರಿಯದ ನೀವು ಚಿತ್ರಕ್ಕೆ ತೆರಿಗೆ ಮುಕ್ತಗೊಳಿಸುವಂತೆ ಕೇಳುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.