ನವದೆಹಲಿ, ಮಾ 25 (DaijiworldNews/MS): ಗಡಿ ದಾಟಿ ಅರಿವಿಲ್ಲದೆ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನಿ ಬಾಲಕಿಯನ್ನು ಮಾನವೀಯ ನೆಲೆಯಲ್ಲಿ ಬುಧವಾರ ರಾತ್ರಿ ಬಿಎಸ್ಎಫ್ ಪಡೆ ಪಾಕಿಸ್ತಾನ ರೇಂಜರ್ಸ್ಗೆ ಹಸ್ತಾಂತರಿಸಿದ್ದಾರೆ.
ಫಜಿಲ್ಕಾ ಜಿಲ್ಲೆಯ ಅಬೋಹರ್ ಸೆಕ್ಟರ್ನ ಗಡಿ ಪ್ರದೇಶದಲ್ಲಿ ನಾಲ್ಕು ವರ್ಷದ ಬಾಲಕಿಯನ್ನು ಬಂಧಿಸಲಾಗಿತ್ತು ಎಂದು ಬಿಎಸ್ಎಫ್ ಪ್ರಕಟಣೆ ತಿಳಿಸಿದೆ.
ಗಡಿ ದಾಟುತ್ತಿರುವುದನ್ನು ಕಂಡು ಬಾಲೆಯನ್ನು ಕಂಡು ಭಾರತೀಯ ಯೋಧರು ಆಕೆಯನ್ನು ವಶಕ್ಕೆ ತೆಗೆದುಕೊಂಡು, ಬಾಲಕಿಯ ಬಳಿ ಆಕ್ಷೇಪಾರ್ಹವಾದ ವಸ್ತು ಪತ್ತೆಯಾದ ಹಿನ್ನಲೆಯಲ್ಲಿ ಪಾಕಿಸ್ತಾನದ ರೇಂಜರ್ಗಳನ್ನು ಸಂಪರ್ಕಿಸಿ ಬಾಲಕಿ ತನ್ನ ಕುಟುಂಬದೊಂದಿಗೆ ಸುರಕ್ಷಿತವಾಗಿ ಸೇರಲೆಂದು ಬಿಎಸ್ಎಫ್ ಪಡೆಗಳು ಕ್ಷಣ ಬುಧವಾರ ರಾತ್ರಿಯೇ ಹಸ್ತಾಂತರಿಸಿದ್ದಾರೆ.