ಹಾವೇರಿ, ಮಾ 24(DaijiworldNews/MS): ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ಚಳಗೇರಿಯಲ್ಲಿರುವ ನವೀನ್ ಶೇಖರಪ್ಪ ಗ್ಯಾನಗೌಡರ್ ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗುರುವಾರ ಭೇಟಿ ನೀಡಿದರು.
ನವೀನ್ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ, ಕುಟುಂಬಸ್ಥರೊಂದಿಗೆ ಕೆಲವು ನಿಮಿಷಗಳ ಕಾಲ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾಧಿಕಾರಿ, ಹಾವೇರಿ ಜಿಲ್ಲಾಧಿಕಾರಿ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.
ನನ್ನ ಹಿರಿಯ ಮಗ ಹರ್ಷನಿಗೆ ಇದೆ ರಾಜ್ಯಪಾಲರು ಗೋಲ್ಡ್ ಮೆಡಲ್ ಕೊಟ್ಟಿದ್ದರು. ಎಲ್ಲವನ್ನೂ ರಾಜ್ಯಪಾಲರು ನೆನಪಿಸಿಕೊಂಡರು. ಪ್ರತಿಭಾವಂತನಾಗಿದ್ದ ನವೀನನನ್ನ ಕಳೆದುಕೊಂಡಿದ್ದಕ್ಕೆ ರಾಜ್ಯಪಾಲ ದುಃಖ ವ್ಯಕ್ತಪಡಿಸಿದ್ದಾರೆ ಎಂದು ನವೀನ್ ತಂದೆ ಶೇಖರಗೌಡ ಹೇಳಿದರು.