ಬೆಳಗಾವಿ, ಮಾ 24 (DaijiworldNews/DB): ಶ್ರೀರಾಮ ಸೇನೆಯಿಂದ ಮುಸ್ಲಿಮರ ಮೇಲೆ ಆರ್ಥಿಕ ಬಹಿಷ್ಕಾರಕ್ಕೆ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಆಂದೋಲನ ರೂಪಿಸಲಾಗುವುದು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಈಗಾಗಲೇ ಹಿಂದೂ ದೇವಳಗಳ ಜಾತ್ರೆಯಲ್ಲಿ ದೇವಳ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಣೆ ಮಾಡಲಾಗಿದೆ. ಇದಕ್ಕೆ ಸಂಘಟನೆ ಸಂಪೂರ್ಣ ಬೆಂಬಲ ಸೂಚಿಸುತ್ತದೆ. ಇದು ಪ್ರಸ್ತುತ ರಾಜ್ಯಾದ್ಯಂತ ಹಬ್ಬಿದೆ. ಸಂಘಟನೆ ವತಿಯಿಂದ ಅವರ ಮೇಲೆ ಆರ್ಥಿಕ ಬಹಿಷ್ಕಾರ ನಡೆಸಲಾಗುವುದು ಎಂದರು.
ಲವ್ ಜಿಹಾದ್, ಹಿಂದೂ ಮುಖಂಡರ ಹತ್ಯೆ ಮುಂತಾದವು ಎಗ್ಗಿಲ್ಲದೆ ನಡೆಯುತ್ತಿದೆ. ಗೋಮಾಂಸ ತಿನ್ನುವುದು, ಗೋಹತ್ಯೆ ಮಾಡುವುದೂ ನಿರಾತಂಕವಾಗಿ ನಡೆಯುತ್ತಿದೆ. ಇದೆಲ್ಲ ನಿಲ್ಲುವವರೆಗೂ ಬಹಿಷ್ಕಾರ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ಇತರ ವ್ಯಾಪಾರ-ವ್ಯವಹಾರ, ಅಟೋರಿಕ್ಷಾ ಏರುವುದಕ್ಕೂ ಬಹಿಷ್ಕಾರ ಹಾಕಲಾಗುವುದು ಎಂದವರು ತಿಳಿಸಿದರು.