ನವದೆಹಲಿ, ಮಾ 23 (DaijiworldNews/HR): ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಶೀಘ್ರದಲ್ಲೇ ಇಂಟರ್ಪೋಲ್ ಗ್ಲೋಬಲ್ ಅಕಾಡೆಮಿ ನೆಟ್ವರ್ಕ್ಗೆ ಸೇರಲು ಸಿದ್ಧವಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಇಂಟರ್ಪೋಲ್ ಸಂಪರ್ಕ ಅಧಿಕಾರಿಗಳ ಸಮ್ಮೇಳನದಲ್ಲಿ ದೃಢಪಡಿಸಿದ್ದು, ಇಂಟರ್ಪೋಲ್ ಗ್ಲೋಬಲ್ ಅಕಾಡೆಮಿಗೆ ಸೇರಲು ಕೇಂದ್ರ ಸರ್ಕಾರ ತಾತ್ವಿಕ ಅನುಮೋದನೆಯನ್ನು ನೀಡಿದೆ ಮತ್ತು ಶೀಘ್ರದಲ್ಲೇ ಸಿಬಿಐ ಅಕಾಡೆಮಿ ಸೇರುವ ನಿರೀಕ್ಷೆಯಿದೆ ಎಂದರು.
ಇನ್ನು ಇಂಟರ್ಪೋಲ್ ಸಂಪರ್ಕ ಅಧಿಕಾರಿಗಳ ಸಮ್ಮೇಳನದಲ್ಲಿ ಎನ್ಸಿಬಿ ಮತ್ತು ಇಂಟರ್ಪೋಲ್ ಸಂಪರ್ಕ ಅಧಿಕಾರಿಗಳು(ಐಎಲ್ಒಗಳು) ಸೇರಿದಂತೆ ಇತರ ಕಾನೂನು ಜಾರಿ ಸಂಸ್ಥೆಗಳು ಭಾಗವಹಿಸಿದ್ದವು ಎನ್ನಲಾಗಿದೆ.