ಶಿವಮೊಗ್ಗ, ಮಾ 23 (DaijiworldNews/MS): ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಬಾಗಲಕೋಟೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್
ಬೆಳಗಾವಿ ತಾಲ್ಲೂಕಿನ ಗೋಕಾಕದ ಶಿಂದಿಕುರಬೆಟ್ನ ಸಿದ್ಧಾರೂಢ ಶ್ರೀಕಾಂತ್ (31) ಬಂಧಿತ ಆರೋಪಿ. ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆಯ ನಂತರ ಅರುಣ್ ವಿರುದ್ಧ ಈತ ಮುಸ್ತಾಕ್ ಎಂಬ ನಕಲಿ ಹೆಸರಿನ ಎಫ್ ಬಿ ಖಾತೆ ಮೂಲಕ ಕೊಲೆ ಬೆದರಿಕೆ ಹಾಕಿದ್ದ.
ಬಾಗಲಕೋಟೆ ಪೊಲೀಸರು ಬೇರೊಂದು ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದಾಗ ಮುಸ್ಲಿಂ ಯುವಕನ ಹೆಸರಲ್ಲಿ ಅರುಣ್ಗೆ ಬೆದರಿಕೆ ಹಾಕಿದ ವಿಷಯ ಬೆಳಕಿಗೆ ಬಂದಿದೆ. ‘ನಿಮ್ಮ ತಲೆಯಲ್ಲಿ ಇವತ್ತು ಕೇವಲ ಒಬ್ಬ ಹಿಂದೂ ಕಾರ್ಯಕರ್ತ ಸತ್ತಿದ್ದಾನೆ ಅಷ್ಟೆ. ಆದ್ರೆ ಮುಂದಿನ ದಿನ ನಿಮ್ಮ ಹೆಂಡಿರು, ಮಕ್ಕಳೇ ನಮ್ಮವರ ಟಾರ್ಗೆಟ್ ' ಎಂದು ಫೇಸ್ಬುಕ್ನಲ್ಲಿ ಬೆದರಿಕೆ ಹಾಕಲಾಗಿತ್ತು.