ನವದೆಹಲಿ, ಮಾ 23 (DaijiworldNews/DB): ಹೀರೋ ಮೋಟೋಕಾರ್ಪ್ನ ಮುಖ್ಯಸ್ಥ ಪವನ್ ಮುಂಜಾಲ್ ಅವರಿಗೆ ಸೇರಿದ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
ಹೀರೋ ಮೋಟೋಕಾರ್ಪ್ನ ಉನ್ನತ ಅಧಿಕಾರಿಗಳಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಗುರುಗ್ರಾಮ್ನಲ್ಲಿರುವ ಪವನ್ ನಿವಾಸ ಮತ್ತು ಕಚೇರಿಯಲ್ಲಿ ಬೆಳಗ್ಗೆಯಿಂದಲೇ ಶೋಧ ಕಾರ್ಯ ನಡೆಯುತ್ತಿದೆ. ಅಲ್ಲದೆ, ದ್ವಿಚಕ್ರ ವಾಹನ ಕಂಪನಿಯ ಇತರ ಉನ್ನತ ಅಧಿಕಾರಿಗಳ ಬಗ್ಗೆಯೂ ಶೋಧ ನಡೆಸಲಾಗುತ್ತಿದೆ.
ಹೀರೋ ಮೋಟೋಕಾರ್ಪ್ ಭಾರತ ಮಾತ್ರವಲ್ಲದೆ, ಏಷ್ಯಾ, ಆಫ್ರಿಕಾ, ದಕ್ಷಿಣ ಅಮೇರಿಕಾ ಮತ್ತು ಮಧ್ಯ ಅಮೆರಿಕ ಸೇರಿದಂತೆ 40 ದೇಶಗಳಲ್ಲಿ ವ್ಯವಹಾರ ನಡೆಸುತ್ತಿದೆ. ಅಲ್ಲದೆ ಸಂಸ್ಥೆಯು ಭಾರತದಲ್ಲಿ ಆರು, ಕೊಲಂಬಿಯಾ ಹಾಗೂ ಬಾಂಗ್ಲಾದಲ್ಲಿ ತಲಾ ಒಂದರಂತೆ ಜಾಗತಿಕವಾಗಿ ಎಂಟು ಮಾನದಂಡದ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ.