ಬೆಂಗಳೂರು, ಮಾ 22 (DaijiworldNews/HR): ಇಂಧನ ಬೆಲೆ ಪಂಚರಾಜ್ಯ ಚುನಾವಣೆ ಬಳಿಕ ಏರಿಕೆಯಾಗಿದೆ ಎಂದು ವಾದಿಸುವವರನ್ನು ಬಾವಿ ಒಳಗಿನ ಕಪ್ಪೆ ಎನ್ನಬೇಕೋ ಅಥವಾ ಪೊಟರೆ ಒಳಗಿನ ಕಪ್ಪೆ ಎನ್ನಬೇಕೋ ಗೊತ್ತಾಗುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ರಾಜ್ಯದ ಚುನಾವಣೆಯಿಂದ ದರ ಏರಿಕೆಯಾಗುತ್ತಿದೆ ಎನ್ನುವುದು ತಪ್ಪು . ಇಡೀ ಜಗತ್ತಿನಲ್ಲೇ ದರ ಏರಿಕೆಯಾಗುತ್ತಿದೆ. ಅವರನ್ನು ಶತ ಮೂರ್ಖರು ಎಂದು ಕರೆಯಬೇಕಾಗುತ್ತದೆ ಎಂದರು.
ಇನ್ನು ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮದವರು ಯಾರು ಯಾರನ್ನು ಬದಲಾಯಿಸುತ್ತೀರಾ? ನಿಮ್ಮ ಹೇಳಿಕೆಗೆ ಉತ್ತರ ಕೊಡಲು ಆಗುತ್ತಾ? ಎಂದು ಹೇಳಿದ್ದಾರೆ.