ಪಾಲನಪುರ, ಮಾ 22 (DaijiworldNews/HR): ಗಡಿ ಭದ್ರತಾ ಪಡೆಯ ಯೋಧರೊಬ್ಬರು ತಮ್ಮ ಸರ್ವಿಸ್ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತಿನ ಬನಸ್ಕಾಂತ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿ ಬಳಿಯಲ್ಲಿರುವ ಲಿಂಬ್ಡಿ ಚೆಕ್ಪೋಸ್ಟ್ ಸಮೀಪ ನಡೆದಿದೆ.
ಸಾಂದರ್ಭಿಕ ಚಿತ್ರ
ಶೂಟ್ ಮಾಡಿಕೊಂಡಿರುವ ಯೋಧನನ್ನು ಭೋಮರಂ ರುಗಾರಂ (44) ಎಂದು ಗುರುತಿಸಲಾಗಿದೆ.
ಯೋಧನ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜಿಲ್ಲೆಯ ಮಾವ್ಸರಿಗೆ ರವಾನಿಸಲಾಗಿದೆ.
ಇನ್ನು ಘಟನೆ ಹಿಂದಿನ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.