ಬೆಂಗಳೂರು, ಮಾ 22 (DaijiworldNews/HR): ಕೊರೊನಾದ 3 ನೇ ಅಲೆ ಬೆನ್ನಲ್ಲೇ ಕೊರೊನಾ ನಾಲ್ಕನೇ ಅಲೆ ಈ ವರ್ಷ ಆಗಸ್ಟ್ನಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ ಎಂಬುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ವಿಧಾನಪರಿಷತ್ ನಲ್ಲಿ ಮಾಹಿತಿ ನೀಡಿದ ಅವರು, ಕೊರೊನಾ 4 ನೇ ಅಲೆ ಈ ವರ್ಷ ಅಗಸ್ಟ್ ನಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದ್ದು, ಅದನ್ನು ಎದುರಿಸಲು ಸರ್ಕಾರ ಸಿದ್ದವಾಗಿದೆ ಎಂದರು.
ಇನ್ನು ನಾಲ್ಕನೇ ಅಲೆ ಬಗ್ಗೆ ಜನತೆ ಹೆದರುವ ಅವಶ್ಯಕತೆಯಿಲ್ಲ. ಆದರೆ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದಿದ್ದಾರೆ.
ಕೊರೊನಾ ವೈರಸ್ ರೂಪಾಂತರಿ ಬಿಎ-2 ಫಿಲಿಪ್ಪಿನ್ಸ್ ದೇಶದಲ್ಲಿ ಮೊದಲು ಪತ್ತೆಯಾಗಿದ್ದು, ಬಳಿದ ವಿಶ್ವದ ಹಲವು ದೇಶಗಳಲ್ಲಿ ಈ ವೈರಸ್ ಕಂಡುಬಂದಿದೆ.