ಗೋವಾ, ಮಾ 22 (DaijiworldNews/HR): ಬಿಜೆಪಿಯು ಗೋವಾ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ರಾಜ್ಯದ ಹಂಗಾಮಿ ಮುಖ್ಯಮಂತ್ರಿಯಾಗಿರುವ ಪ್ರಮೋದ್ ಸಾವಂತ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಫೆಬ್ರವರಿ 14ರಂದು ನಡೆದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಮಣಿಪುರ, ಉತ್ತರ ಪ್ರದೇಶದಂತೆಯೇ ಗೋವಾದಲ್ಲಿ ಕೂಡ ಹಿಂದಿನ ಮುಖ್ಯಮಂತ್ರಿಯನ್ನೇ ಬಿಜೆಪಿ ಮುಂದುವರೆಸುತ್ತಿದ್ದು, ಪ್ರಮೋದ್ ಸಾವಂತ್ ಅವರಿಗೆ 2ನೇ ಬಾರಿಗೆ ಗೋವಾ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಲು ಪಕ್ಷ ಅವಕಾಶ ನೀಡಿದೆ.
ಇನ್ನು ಗೋವಾದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ 21 ನಂಬರ್ ಯಾರಿಗೂ ಸಿಕ್ಕಿರಲಿಲ್ಲ. ಆದರೆ ಮೂವರು ಪಕ್ಷೇತರರು, ಇಬ್ಬರು ಎಂಜಿಪಿ ಅಭ್ಯರ್ಥಿಗಳು ಬಿಜೆಪಿಗೆ ಬೆಂಬಲ ನೀಡಿದ್ದರು. ಬಿಜೆಪಿ 25ಕ್ಕೆ ಏರಿಕೆಯಾಗಿ ಪಕ್ಷ ಸರ್ಕಾರ ರಚನೆ ಮಾಡುತ್ತಿದೆ.