ದಾವಣಗೆರೆ, ಮಾ. 21 (DaijiworldNews/SM): ಉಕ್ರೇನ್ ನಲ್ಲಿ ರಷ್ಯಾ ದಾಳಿಯಿಂದಾಗಿ ಹುತಾತ್ಮನಾದ ನವೀನ್ ಪಾರ್ಥೀವ ಶರೀರವನ್ನು ಕುಟುಂಬಸ್ಥರು ದಾವಣಗೆರೆಯ ಎಸ್. ಎಸ್. ಹೈಟೆಕ್ ಆಸ್ಪತ್ರೆಗೆ ಹಸ್ತಾಂತರಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಂತಾಗಿದೆ.
ನವೀನ್ ಸಹೋದರ ಹಾಗೂ ಅವರ ತಾಯಿಯ ಮೊಗದಲ್ಲಿ ನೋವಿನ ಕಾರ್ಮೋಡ ಕವಿದಿತ್ತು. ಸಹೋದರನಿಗೆ ಸಿಹಿಮುತ್ತು ನೀಡಿ ಪಾರ್ಥೀವ ಶರೀರ ಹಸ್ತಾಂತರ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಇನ್ನು ರಷ್ಯಾ ಉಕ್ರೇನ್ ದಾಳಿ ಸಂದರ್ಭದಲ್ಲಿ ಯುದ್ಧದ ವೇಳೆ ಗುಂಡಿನ ದಾಳಿಗೆ ನವೀನ್ ಬಲಿಯಾಗಿದ್ದರು. ಇತ್ತೀಚಿಗೆ ನವೀನ್ ಅವರ ತಂದೆ ನವೀನ್ ಮೃತದೇಹವನ್ನು ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇಂದು ಮೃತದೇಹ ದಾನ ಮಾಡಲಾಗಿದೆ. ಕುಟುಂಬ ದುಃಖದ ನಡುವೆಯೂ ಸಾರ್ಥಕತೆ ಮೆರೆದಿದೆ.
ಆ ಬಳಿಕ ಮೃತದೇಹವನ್ನು ತಾಯ್ನಾಡಿಗೆ ತರಲು ಸ್ವಲ್ಪ ವಿಳಂಬವಾಯಿತು. ಆದರೆ, ಸರಕಾರದ ನಿರಂತರ ಪ್ರಯತ್ನದಿಂದಾಗಿ ಇದೀಗ ಮೃತದೇಹ ತವರು ತಲುಪಿದೆ.