ಮುಂಬೈ, ಮಾ 21 (DaijiworldNews/HR): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಎನ್ಸಿಪಿ ನಾಯಕ, ಸಚಿವ ನವಾಬ್ ಮಲಿಕ್ ಕಸ್ಟಡಿಯನ್ನ ಏಪ್ರಿಲ್ 4ರವರೆಗೆ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ.
ನವಾಬ್ ಮಲಿಕ್ ಅವರಿಗೆ ಬೆನ್ನುನೋವಿನ ಕಾರಣ ಹಾಸಿಗೆ, ಕುರ್ಚಿ ಮತ್ತು ಚಾಪೆಗಳ ಬಳಕೆಗೆ ಅನುಮತಿಸಲಾಗಿದೆ.
ಇನ್ನು ಫೆಬ್ರವರಿ 23 ರಂದು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ನವಾಬ್ ಮಲಿಕ್ರನ್ನ ಇಡಿ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಮಾರ್ಚ್ 3 ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ. ನಂತರದ ವಿಚಾರಣೆಯನ್ನು ಮತ್ತೆ ವಿಸ್ತರಿಸಿ, ಮಾರ್ಚ್ 21 ರವರೆಗೆ ರಿಮಾಂಡ್ ನೀಡಲಾಯಿತು.
ಮಲಿಕ್ ಅವರ ಕಸ್ಟಡಿ ಅಂತ್ಯಗೊಳ್ಳುತ್ತಿದ್ದಂತೆ ಇಂದು ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ಏಪ್ರಿಲ್ 4 ರವರೆಗೆ ಕಸ್ಟಡಿ ವಾಸ ವಿಸ್ತರಿಸಲಾಗಿದೆ.