ನವದೆಹಲಿ, ಮಾ 21 (DaijiworldNews/MS): ದೆಹಲಿಯಿಂದ ದೋಹಾಗೆ ಪ್ರಯಾಣಿಸುತ್ತಿದ್ದ ಕತಾರ್ ಏರ್ವೇಸ್ ವಿಮಾನವು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
QR579 ಕತಾರ್ ಏರ್ವೇಸ್ ವಿಮಾನ ದೆಹಲಿಯಿಂದ 100 ಕ್ಕೂ ಹೆಚ್ಚು ಪ್ರಯಾಣಿಕರನ್ನು ದೋಹಾಗೆ ಹೊತ್ತೊಯ್ಯುತ್ತಿತ್ತು. ಆದರೆ ಸರಕು ಸಂಗ್ರಹಣಾ ವಿಭಾಗದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನಲೆಯ ಸೂಚನೆಯಿಂದಾಗಿ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ತಿಳಿದುಬಂದಿದೆ. ಪ್ರಯಾಣಿಕರನ್ನು ದೋಹಾಗೆ ಕರೆದೊಯ್ಯಲು ಮತ್ತೊಂದು ವಿಮಾನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಏರ್ಲೈನ್ಸ್ ತಿಳಿಸಿದೆ.
ಘಟನೆಯು ಪ್ರಸ್ತುತ ತನಿಖೆಯಲ್ಲಿದೆ ಮತ್ತು ಪ್ರಯಾಣಿಕರನ್ನು ದೋಹಾಕ್ಕೆ ಸಾಗಿಸಲು ಬೇರೊಂದು ವಿಮಾನವನ್ನು ವ್ಯವಸ್ಥೆಗೊಳಿಸಲಾಗುತ್ತಿದೆ. ಮುಂದಿನ ಪ್ರಯಾಣಕ್ಕೆ ಸಹಾಯ ಮಾಡಲಿದ್ದೇವೆ. ನಮ್ಮ ಪ್ರಯಾಣಿಕರಿಗೆ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ" ಎಂದು ಕತಾರ್ ಏರ್ವೇಸ್ ಹೇಳಿದೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹೃದ್ರೋಗ ತಜ್ಞರಾಗಿರುವ ಡಾ ಸಮೀರ್ ಗುಪ್ತಾ ಪರಿಸ್ಥಿತಿಯ ಬಗ್ಗೆ ದೂರು ನೀಡಲು ಟ್ವೀಟ್ ಮಾಡಿದ್ದು. "QR579 - ದೆಹಲಿ-ದೋಹಾದ ಪರಿಸ್ಥಿ ಏನಾಗಿದೆ? ಯಾಕೆ ಕರಾಚಿಗೆ ತಿರುಗಿಸಲಾಗಿದೆ? ಯಾವುದೇ ಮಾಹಿತಿಯನ್ನು ನೀಡಲಾಗುತ್ತಿಲ್ಲ, ಪ್ರಯಾಣಿಕರಿಗೆ ಆಹಾರ ಅಥವಾ ನೀರನ್ನು ನೀಡುತ್ತಿಲ್ಲ. ಯಾವುದೇ ಸುಳಿವು ನೀಡುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ" ಎಂದು ಟ್ವೀಟ್ ಮಾಡಿದ್ದಾರೆ.