ನೋಯ್ಡಾ, ಮಾ 21 (DaijiworldNews/MS): ಕೆಲಸ ಮುಗಿಸಿ ಮಧ್ಯರಾತ್ರಿ 10 ಕಿ.ಮೀ ಓಡಿ ಮನೆ ಸೇರೋ ಯುವಕ ನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು , ಈತ ಹಲವರಿಗೆ ಈಗ ಸ್ಪೂರ್ತಿಯ ಕಾರಣವಾಗಿದ್ದಾನೆ. ಈತ ಓಡುತ್ತಿರುವುದು ಬಹುದೊಡ್ಡ ಕನಸು ಈಡೇರಿಸಲೆಂದರೆ ಮೆಚ್ಚಲೇಬೇಕು.
ಮೂಲತಃ ಉತ್ತರಾಖಂಡದವನಾದ ಪ್ರದೀಪ್ ಮೆಹ್ರಾ (19) ನೋಯ್ಡಾದಲ್ಲಿ ಮೆಕ್ಡೋನಾಲ್ಡ್ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ. ಕೆಲಸ ಮುಗಿಸಿ ಮಧ್ಯರಾತ್ರಿ ಬರೋಬ್ಬರಿ 10 ಕಿಲೋಮೀಟರ್ ಓಡುತ್ತಲೇ ಬರೋಲಾದಲ್ಲಿರುವ ಮನೆ ಸೇರುತ್ತಾರೆ. ಸಹೋದರನಿಗೆ ರಾತ್ರಿ ಪಾಳಿಯಲ್ಲಿ ಕೆಲಸ. ಈತನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ.
ಭಾರತೀಯ ಸೇನೆ ಸೇರಿಕೊಂಡು ದೇಶ ಸೇವೆ ಮಾಡಬೇಕು ಎಂಬ ಮಹತ್ವಕಾಂಕ್ಷೆ ಹೊಂದಿರುವ ಈತ ಸೇನೆ ಸೇರಲು ದೈಹಿಕವಾಗಿ ಸದೃಢವಾಗಿರಬೇಕು ಎಂದು ಕೆಲಸ ಮುಗಿಸಿ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕೆಂಬ ಉದ್ದೇಶದಿಂದ ಪ್ರತಿ ರಾತ್ರಿ ನಗರದ ರಸ್ತಗಳಲ್ಲಿ 10 ಕಿ.ಮೀ ಓಡುವ ಮೂಲಕ ಆರ್ಮಿ ಸೇರಿಕೊಳ್ಳಲು ತಯಾರಿ ನಡೆಸುತ್ತಾ ಮನೆ ಸೇರುತ್ತಾನೆ.
ಬೆಳಗ್ಗೆ ಕೆಲಸಕ್ಕೂ ಬೇಗ ಹೋಗಬೇಕು, ವ್ಯಾಯಾಮ, ಜಾಗಿಂಗ್, ಜಿಮ್ಗೆ ತೆರಳಲು ನನ್ನ ಬಳಿ ಸಮಯವೂ ಇಲ್ಲ, ಹಣವೂ ಇಲ್ಲ ಹೀಗೆ ಸಿಗುವ ವೇತನದಲ್ಲೇ ತಾಯಿಯ ಆರೋಗ್ಯ ನೋಡಿಕೊಳ್ಳುಬೇಕು, ಮನೆ ಖರ್ಚು ನಿಭಾಯಿಸಬೇಕು. ಜೊತೆಗೆ ನನ್ನ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕೆಂದು ಕೆಲಸ ಮುಗಿಸಿ ಓಡುತ್ತಲೆ ಮನೆ ಸೇರಿಕೊಳ್ಳುತ್ತಾನೆ.
ಇನ್ನು ಪ್ರದೀಪ್ ಈ ರೀತಿ ಓಡುತ್ತಿರುವುದನ್ನು ಗಮನಿಸಿದ ಕಾರಿನಲ್ಲಿದ್ದ ಚಲನಚಿತ್ರ ನಿರ್ಮಾಪಕ ಮತ್ತು ಲೇಖಕ ವಿನೋದ್ ಕಪ್ರಿ ಈ ಯುವಕನನ್ನು ಪ್ರಶ್ನಿಸಿದ್ದಾರೆ. ಕಾರಿನಲ್ಲಿ ಬಿಡುವುದಾಗಿ ಹೇಳಿದ್ದಾರೆ. ಇದನ್ನು ನಿರಾಕರಿಸಿದ ಪ್ರದೀಪ್ ಈ ರೀತಿ ಓಡುತ್ತಿರುವುದು ಯಾಕೆ? ಎಂದು ಕೇಳಿದ ಪ್ರಶ್ನೆಗಳಿಗೆಲ್ಲಾ ಓಡುತ್ತಲೇ ಉತ್ತರಿಸಿದ್ದಾನೆ.