ಬೆಂಗಳೂರು, ಮಾ. 20 (DaijiworldNews/SM): ಉಕ್ರೇನ್ ನಲ್ಲಿ ರಷ್ಯಾದ ಶೆಲ್ ದಾಳಿಯಿಂದಾಗಿ ಮೃತಪಟ್ಟ ಕನ್ನಡಿಗ ಹಾವೇರಿ ಮೂಲಕದ ವಿದ್ಯಾರ್ಥಿ ನವೀನ್ ಪಾರ್ಥೀವ ಶರೀರ ಮಾರ್ಚ್ 21ರ ಸೋಮವಾರ ಮುಂಜಾನೆ ತವರು ತಲುಪಲಿದೆ.
ಈಗಾಗಲೇ ಮೃತದೇಹ ದುಬೈ ತಲುಪಿದೆ. ಶನಿವಾರದಂದು ಉಕ್ರೇನ್ ನಿಂದ ಶಿಫ್ಟ್ ಮಾಡಲಾಗಿತ್ತು. ದುಬೈನಿಂದ ನೇರವಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೃತದೇಹ ರವಾನೆಯಾಗಲಿದೆ. ಇನ್ನು ಸೋಮವಾರ ಮುಂಜಾನೆ ೩ ಗಂಟೆಗೆ ಬೆಂಗಳೂರು ತಲುಪಲಿದ್ದು, ಬಳಿಕ ರಸ್ತೆ ಮಾರ್ಗದ ಮೂಲಕ ಪೊಲೀಸ್ ಭದ್ರತೆಯೊಂದಿಗೆ ಪಾರ್ಥಿವ ಶರೀರ ಹುಟ್ಟೂರು ಹಾವೇರಿಗೆ ರವಾನೆಯಾಗಲಿದೆ.