ಧಾರವಾಡ, ಮಾ 20 (DaijiworldNews/HR): ಆರ್ಟಿಕಲ್ 370 ರದ್ದುಗೊಳಿಸಿದ್ದೇವೆ. ಈಗ ಕಾಶ್ಮೀರ ಶಾಂತವಾಗಿದೆ. ಉಗ್ರರು ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಯತ್ನಿಸಿದರೆ ಬಿಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪಂಡಿತರ ಮೇಲೆ ದೌರ್ಜನ್ಯದ ವೇಳೆ ವಿ.ಪಿ ಸಿಂಗ್ ಸರ್ಕಾರವಿತ್ತು. ಬಿಜೆಪಿ ಆ ಸರ್ಕಾರದ ಭಾಗವಾಗಿರಲಿಲ್ಲ. ವಿ.ಪಿ ಸಿಂಗ್ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಟ್ಟಿದ್ದೆವು. ವಿ.ಪಿ ಸಿಂಗ್ ಸರ್ಕಾರ ಹಿಂದೂ ವಿರೋಧಿಯಾಗಿ ಪರಿವರ್ತನೆಯಾಯ್ತು ಎಂದರು.
ಇನ್ನು ಈಗಾಗಲೇ ಬೆಂಗಳೂರಿನಲ್ಲಿ ಕಾಶ್ಮೀರಿ ಪಂಡಿತರ ಸರ್ವೇ ಕಾರ್ಯ ಆಗಿದೆ ಎಂಬ ಮಾಹಿತಿ ಇದ್ದು, ಅವರು ಬಯಸಿದ್ರೆ, ಅವ್ರು ಬಯಸಿದ ಸ್ಥಳದಲ್ಲಿ ಸರ್ಕಾರ ಪುನರ್ವಸತಿ ಕಲ್ಪಿಸಲಿದೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಾ ಬಂದಿದೆ. ಕಾಶ್ಮೀರ್ ಫೈಲ್ಸ್ ವಿರೋಧ ಮಾಡೋದಕ್ಕೆ ಇದೇ ಕಾರಣ ಎಂದು ಹೇಳಿದ್ದಾರೆ.