ನವದೆಹಲಿ, ಮಾ 20 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಸೋಮವಾರ ಎರಡನೇ ಭಾರತ-ಆಸ್ಟ್ರೇಲಿಯಾ ವರ್ಚುವಲ್ ಶೃಂಗಸಭೆ ನಡೆಸಲಿದ್ದಾರೆ.
ಈ ಶೃಂಗಸಭೆಯು ಜೂನ್ 2020 ರಲ್ಲಿ ಐತಿಹಾಸಿಕ ಮೊದಲ ವರ್ಚುವಲ್ ಶೃಂಗಸಭೆಯನ್ನು ಅನುಸರಿಸಲಿದ್ದು, ಈ ಸಂಬಂಧವನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಉನ್ನತೀಕರಿಸಲಾಯಿತು. ಮುಂಬರುವ ವರ್ಚುವಲ್ ಶೃಂಗಸಭೆಯ ಸಮಯದಲ್ಲಿ ಉಭಯ ನಾಯಕರು ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಅಡಿಯಲ್ಲಿ ವಿವಿಧ ಉಪಕ್ರಮಗಳಲ್ಲಿ ಮಾಡಿದ ಪ್ರಗತಿಯನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ.
ಇನ್ನು ವ್ಯಾಪಾರ, ವಲಸೆ ಮತ್ತು ಚಲನಶೀಲತೆ ಮತ್ತು ಶಿಕ್ಷಣದಲ್ಲಿ ನಿಕಟ ಸಹಕಾರಕ್ಕೆ ನಾಯಕರು ಬದ್ಧರಾಗುವ ನಿರೀಕ್ಷೆಯಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.