ಹರಿದ್ವಾರ, ಮಾ 20 (DaijiworldNews/DB): ಶಿಕ್ಷಣವನ್ನು ಸರಕಾರ ಕೇಸರೀಕರಣಗೊಳಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಕೇಸರಿಯಲ್ಲಿ ಅಂತಹ ತಪ್ಪು ಏನಿದೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ದು ಪ್ರಶ್ನಿಸಿದ್ದಾರೆ.
ಹರಿದ್ವಾರದ ದೇವ ಸಂಸ್ಕೃತಿ ವಿಶ್ವವಿದ್ಯಾನಿಲಯದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ನಾವು ವಸಾಹತುಶಾಹಿ ಮನೋಭಾವದಿಂದ ಹೊರಬಂದು ಮೆಕಾಲೆ ಶಿಕ್ಷಣ ಪದ್ದತಿಯನ್ನು ಸಂಪೂರ್ಣ ತೊಡೆದು ಹಾಕಬೇಕು ಎಂದರು.
ಭಾರತೀಯ ಶಿಕ್ಷಣ ಪದ್ಧತಿ ತೀರಾ ಅಗತ್ಯವಾಗಿದೆ. ಹೊಸ ಶಿಕ್ಷಣ ನೀತಿಯಿಂದ ಮಾತೃಭಾಷೆಗಳಿಗೆ ಪ್ರಾಧಾನ್ಯ ಸಿಗಲಿದೆ. ವಿದೇಶೀ ಶಿಕ್ಷಣ ಪದ್ದತಿಯಲ್ಲಿ ಇಂತಹ ವ್ಯವಸ್ಥೆ ಇಲ್ಲ ಎಂದವರು ಇದೇ ವೇಳೆ ತಿಳಿಸಿದರು.