ಮುಂಬೈ,ಮಾ 19 (DaijiworldNews/HR): ಬಾಲಿವುಡ್ ಸಿನಿಮಾ ನಿರ್ದೇಶಕ ಗಿರೀಶ್ ಮಲಿಕ್ ಅವರ ಮಗ ಮನ್ನನ್(17) ಮುಂಬೈನ ಅಂಧೇರಿಯಲ್ಲಿರುವ ಅಪಾರ್ಟ್ಮೆಂಟ್ನ 5 ನೇ ಮಹಡಿಯಿಂದ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಗಿರೀಶ್ ಮಲಿಕ್
ಮನ್ನನ್ ಆಕಸ್ಮಿಕವಾಗಿ ಮೇಲಿಂದ ಜಾರಿ ಬಿದ್ದಿದ್ದು, ತಕ್ಷಣ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಮನ್ನನ್ ಬದುಕುಳಿಯಲಿಲ್ಲ.
ನಿರ್ದೇಶಕ ಗಿರೀಶ್ ಅವರ ಮಗ ಮನ್ನನ್ ಶುಕ್ರವಾರ ಹೋಳಿ ಹಬ್ಬದ ಪ್ರಯುಕ್ತ ಗೆಳೆಯರೊಂದಿಗೆ ಹೋಳಿ ಆಡಿದ ನಂತರ ಮನೆಗೆ ವಾಪಾಸ್ ಬಂದಿದ್ದು, ಬಳಿಕ ತನ್ನ ಮನೆಯಿಂದ ಕೆಳಗೆ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.