ಮೈಸೂರು, ಮಾ 19 (DaijiworldNews/HR): ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನಾನು ನೋಡಿಲ್ಲ, ಮುಂದೆನೂ ನೋಡಲ್ಲ ಎಂದು ಸಾಮಾಜಿಕ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಪಕ್ಷದವರೂ ಒಂದೊಂದು ಸ್ಟುಡಿಯೋ ಇಟ್ಟುಕೊಳ್ಳಿ. ನಿಮ್ಮ ಪಕ್ಷದ ಪರ ಮಾಡಿರುವ ಕೆಲಸಗಳ ಬಗ್ಗೆ ಸಿನಿಮಾ ಮಾಡಿ. ಕಾಶ್ಮೀರ್ ಫೈಲ್ಸ್ ಚಿತ್ರದಿಂದ ನಿರ್ಮಾಪಕನಿಗೆ ಲಾಭವಷ್ಟೇ. ಇದರಿಂದ ಯಾರಿಗೂ ಲಾಭವಿಲ್ಲ ಎಂದಿದ್ದಾರೆ.
ಇನ್ನು ಈ ಸಿನಿಮಾದ ಬಗ್ಗೆ ಅನಗತ್ಯ ಚರ್ಚೆಯೂ ಬೇಕಿಲ್ಲ. ಇನ್ನು ನಾನು ಕಾಶ್ಮೀರ್ ಫೈಲ್ಸ್ ಚಿತ್ರ ನೋಡಿಲ್ಲ, ನೋಡುವುದೂ ಇಲ್ಲ ಎಂದು ಹೇಳಿದ್ದಾರೆ.