ಧರ್ಮಶಾಲಾ, ಮಾ 19 (DaijiworldNews/MS): ಕೋವಿಡ್ ಸಾಂಕ್ರಾಮಿಕ ರೋಗವು ದೇಶವನ್ನು ಅಪ್ಪಳಿಸಿದ ಸುಮಾರು ಎರಡು ವರ್ಷಗಳ ನಂತರ ಬೌದ್ಧ ಧರ್ಮ ಗುರು ದಲೈ ಲಾಮಾ ಮೊದಲ ಬಾರಿಗೆ ಶುಕ್ರವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ದಲೈ ಲಾಮಾ ಶುಕ್ರವಾರ ಧರ್ಮಶಾಲಾದಲ್ಲಿ 14 ನೇ ದಲೈ ಲಾಮಾ ಅವರು ತಮ್ಮ ಅನುಯಾಯಿಗಳಿಗೆ 'ಜಟಕ' ಕಥೆಗಳ ಕಿರು ಬೋಧನೆಯನ್ನು ಮಾಡಿದ್ದು, ಮುಖ್ಯ ಟಿಬೆಟಿಯನ್ ದೇವಾಲಯವಾದ ತ್ಸುಗ್ಲಾಖಾಂಗ್ನಲ್ಲಿ ಟಿಬೆಟಿಯನ್ ಬೋಧಿಸತ್ವ (ಅಥವಾ ಬೋಧಿಚಿಟ್ಟಾ) ಪ್ರತಿಜ್ಞೆ ಸಮಾರಂಭ ನೆರವೇರಿಸಿದರು.
ಬಳಿಕ ಪ್ರತಿಕ್ರಿಯಿಸಿರುವ ಅವರು, 'ನಾನೀಗ ಆರೋಗ್ಯವಂತನಾಗಿದ್ದು, ವೈದ್ಯರೊಂದಿಗೆ ಬಾಕ್ಸಿಂಗ್ ಕೂಡಾ ಆಡಬಹುದು .ನಾನು ನಿಯಮಿತವಾಗಿ ವೈದ್ಯಕೀಯ ತಪಾಸಣೆಗಾಗಿ ದೆಹಲಿಯ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಉತ್ತಮ ಆರೋಗ್ಯ ಹೊಂದಿರುವುದರಿಂದ ಈಗ ಹೋಗುತ್ತಿಲ್ಲ' ಎಂದು ಹೇಳಿದರು.
ಸನ್ಯಾಸಿಗಳು ಮತ್ತು ಕೇಂದ್ರ ಟಿಬೆಟಿಯನ್ ಆಡಳಿತದ (CTA) ಸದಸ್ಯರು ಸೇರಿದಂತೆ ಸಾವಿರಾರು ಬಿಕ್ಕುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು