ಶ್ರೀನಗರ, ಮಾ 18 (DaijiworldNews/HR): ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿ (ಲಷ್ಕರ್-ಎ-ತೊಯ್ಬಾ) ನೊಂದಿಗೆ ನಂಟು ಹೊಂದಿರುವ ಆರು ಭಯೋತ್ಪಾದಕ ಸಹಚರರನ್ನು ಪೊಲೀಸರು ಬಂಧಿಸಿರುವ ಘಟನೆ ಪುಲ್ವಾಮಾದಲ್ಲಿ ನಡೆದಿದೆ.
ಬಂಧಿತ ಭಯೋತ್ಪಾದಕರನ್ನು ಲೆಲ್ಹರ್ ಕಾಕಪೋರಾದ ಅಬ್ ಮಜೀದ್ ಲೋನ್ ಅವರ ಪುತ್ರ ರೂಫ್ ಅಹ್ಮದ್ ಲೋನ್ ಅಮ್ಜಿದ್, ಅಲೋಚಿಬಾಗ್ ಪಾಂಪೋರ್ ನಿವಾಸಿ ಮೊಹಮ್ಮದ್ ಮಕ್ಬೂಲ್ ಭಟ್ ಅವರ ಪುತ್ರ ಅಖೀಬ್ ಮಕ್ಬೂಲ್ ಭಟ್, ಲಾರ್ವ್ ಕಾಕಪೋರಾ ನಿವಾಸಿ ಘ್ ಮೊಹಿ-ಉದ್-ದಿನ್ ದರ್ ಅವರ ಪುತ್ರ ಜಾವೈದ್ ಅಹ್ಮದ್ ದಾರ್ ಪರಿಗಮ್ ಪುಲ್ವಾಮಾ ನಿವಾಸಿ ಅಬ್ ರಶೀದ್ ಮಿರ್ ಅವರ ಪುತ್ರ ಅರ್ಷಿದ್ ಅಹ್ಮದ್ ಮಿರ್, ಪರಿಗಮ್ ಪುಲ್ವಾಮಾ ನಿವಾಸಿ ಘ್ ಅಹ್ಮದ್ ಭಟ್ ಅವರ ಪುತ್ರ ರಮೀಜ್ ರಾಜಾ ಮತ್ತು ಲಾರ್ವೆ ಕಾಕಪೋರಾ ನಿವಾಸಿ ಘ್ ಮೋಹಿ-ಉದ್-ದಿನ್ ದಾರ್ ಅವರ ಪುತ್ರ ಸಜಾದ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ.
ಇನ್ನು ಬಂಧಿತ ಭಯೋತ್ಪಾದಕ ಸಹಚರರು ಲಾಜಿಸ್ಟಿಕ್ಸ್, ಆಶ್ರಯ, ಭಯೋತ್ಪಾದಕ ಹಣಕಾಸು ನಿರ್ವಹಣೆ ಮತ್ತು ವರ್ಗಾವಣೆ ಮತ್ತು ಹೈಬ್ರಿಡ್ ಭಯೋತ್ಪಾದಕರಾಗಿ ಕಾರ್ಯನಿರ್ವಹಿಸಲು ಯುವಕರನ್ನು ಪ್ರೇರೇಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಕಾಕಪೋರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಂಖ್ಯೆ 19/20222 ರಂತೆ ಕಾನೂನು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.