ಬೆಂಗಳೂರು, ಮಾ 18 (DaijiworldNews/HR): ಸಚಿವ ಅಶ್ವಥ್ ನಾರಾಯಣ ಮತ್ತು ಆರ್.ಅಶೋಕ್ ನಡುವೆ ರಾಮನಗರ ತಹಸೀಲ್ದಾರ್ ವರ್ಗಾವಣೆ ವಿಷಯವಾಗಿ ಕಿತ್ತಾಟ ನಡೆದಿದೆ ಎಂಬ ವಿಚಾರದ ಬಗ್ಗೆ ಸಚಿವರು ಸ್ಪಷ್ಟೀಕರಣ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ನನ್ನ ಮತ್ತು ಆರ್.ಅಶೋಕ್ ನಡುವೆ ಮಾತುಕತೆ ಅಷ್ಟೆ ನಡೆದಿದೆ. ರಾಮನಗರ, ಮಾಗಡಿಯಲ್ಲಿ ಯಾರನ್ನು ಪೋಸ್ಟಿಂಗ್ ಮಾಡುವ ವಿಚಾರದಲ್ಲಿ ಕೋರಿಕೆಯಾಗಿತ್ತು. ಕಂದಾಯ ಸಚಿವರು ಇದನ್ನ ಪರಿಗಣಿಸಿ ನೋಡ್ತೀವಿ ಎಂದು ಹೇಳಿದ್ದಾರೆ ಎಂದರು.
ಇನ್ನು ಸಚಿವ ಅಶೋಕ್ ಹಾಗೂ ನಾನು ಒಂದೇ ಪಕ್ಷದಲ್ಲಿರುವವರು. ಸಹೋದರರ ರೀತಿ ಇರಬೇಕು. ನಾವೆಲ್ಲರೂ ಬಂದಿರೋದು ಜನರ ಪರವಾಗಿ. ವ್ಯತ್ಯಾಸಗಳು ಬರ್ತಾವೆ, ಹೋಗ್ತಾವೆ, ಅದನ್ನೇ ಹೆಚ್ಚಾಗಿ ಒತ್ತು ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಆರ್ ಅಶೋಕ ಮತ್ತು ಅಶ್ವಥ್ ನಾರಾಯಣ್ ಕಚ್ಚಾಡಲಿಲ್ಲ. ಯಾವುದೇ ಘಟನೆ ನಡೆಯಲಿಲ್ಲ. ಅವರು ಸಾಮರಸ್ಯದಿಂದ ಮಾತಾಡಿದ್ದಾರೆ ಎಂದು ಹೇಳಿದ್ದಾರೆ.