ಬೆಂಗಳೂರು, ಮಾ 18 (DaijiworldNews/HR): ಮೇ 21 ಮತ್ತು 22ರಂದು ಶಿಕ್ಷಕರ ನೇಮಕಾತಿ ಸಾಮಾನ್ಯ ಪ್ರವೇಶ ಪರೀಕ್ಷೆಯು ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 15 ಸಾವಿರ ಶಿಕ್ಷಕರ ನೇಮಕಾತಿ ಸಂಬಂಧ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಮಾ.22 ರಿಂದ ಏ.22ರ ವರೆಗೆ ಅರ್ಜಿ ಸಲ್ಲಿಕೆ ಅವಕಾಶವಿದ್ದು, ಆರರಿಂದ ಎಂಟು ತಿಂಗಳಿನಲ್ಲಿ ಪ್ರಕ್ರಿಯೆ ಪೂರ್ಣವಾಗಲಿದೆ ಎಂದರು.
ಇನ್ನು ಪರೀಕ್ಷೆಗೆ ಮೂರು ಪತ್ರಿಕೆಗಳು ಇರಲಿದ್ದು, ಮೊದಲ ಮತ್ತು ಎರಡನೇ ಪತ್ರಿಕೆ ತಲಾ 150 ಅಂಕಗಳು, ಮೂರನೇ ಪತ್ರಿಕೆ ನೂರು ಅಂಕ ಇರುತ್ತದೆ. ಎರಡನೇ ಪತ್ರಿಕೆ ಅರ್ಹತಾ ಅಂಕಗಳನ್ನು 50 ರಿಂದ 45 ಕ್ಕೆ ಮತ್ತು ಮೂರನೇ ಪತ್ರಿಕೆ 60ರಿಂದ 50ಕ್ಕೆ ಇಳಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.