ಬೆಂಗಳೂರು, ಮಾ 18 (DaijiworldNews/DB): ರಾಜ್ಯದಲ್ಲಿ ಪ್ರಮುಖವಾಗಿರುವ ಮೂರು ಪಕ್ಷಗಳ ನಾಯಕತ್ವ ಅಗತ್ಯವಾಗಿ ಬದಲಾಗಬೇಕು. ಇಲ್ಲವಾದಲ್ಲಿ ಎಎಪಿ ಎಲ್ಲವನ್ನೂ ಧೂಳೀಪಟ ಮಾಡಲಿದೆ ಎಂದು ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಹೇಳಿದರು.
ಸದನದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಗುರುವಾರ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನ ನಾಯಕತ್ವ ಬದಲಾಗಬೇಕು. ಇಲ್ಲವಾದರೆ ದೆಹಲಿಯಂತೆ ಕರ್ನಾಟಕದಲ್ಲಿಯೂ ಎಎಪಿ ಮುಂದುವರಿಯಲಿದೆ ಎಂದರು.
ನಾನು 12 ವರ್ಷಗಳಿಂದ ಪಕ್ಷದಲ್ಲಿದ್ದೇನೆ. ಹೊಸಬರಿಗೆ ಅವಕಾಶ ಸಿಗಬೇಕೆಂಬ ಕಾರಣಕ್ಕಾಗಿ ಮತ್ತೆ ಅವಕಾಶ ಕೇಳುವುದಿಲ್ಲ. ಇದು ಸದನದಲ್ಲಿ ನನ್ನ ಕೊನೆಯ ಭಾಷಣವಾಗಿರುತ್ತದೆ ಎಂದವರು ತಿಳಿಸಿದರು.