ಚಾಮರಾಜನಗರ, ಮಾ 18 (DaijiworldNews/MS): ಬಾಣಂತಿ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ಪತಿ ಆನಂದ್ ಕಾಂಬ್ಳೆನನ್ನು ಪಿಡಿಒ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿದುಂದಿದೆ.
ಹನೂರು ತಾಲ್ಲೂಕಿನ ಮಂಗಲ ಗ್ರಾಮ ಪಂಚಾಯತ್ ಪಿಡಿಒ ಆನಂದ್ ಕಾಂಬ್ಳೆ ಯ ಪತ್ನಿ ದಿವ್ಯಾಶ್ರೀ 8 ತಿಂಗಳ ಹಸುಗೂಸನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. 3 ವರ್ಷಗಳ ಹಿಂದೆ ಇವರಿಬ್ಬರ ವಿವಾಹವಾಗಿದ್ದು, ಕುಟುಂಬವು, ಕೌಟಂಬಿಕ ಕಲಹ ಹಾಗೂ ವರದಕ್ಷಿಣೆ ಮತ್ತು ಶೀಲ ಶಂಕಿಸುತ್ತಿದ್ದ ಪತಿಯ ವರ್ತನೆಯಿಂದ ದಿವ್ಯಾಶ್ರೀ ಬೇಸತ್ತಿದ್ದರು ಎನ್ನಲಾಗಿದೆ. ಆತ್ಮಹತ್ಯೆ ಬಳಿಕ ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಅಳಿಯನೇ ಮಗಳ ಕೊಲೆ ಮಾಡಿದ್ದಾನೆ ಎಂದು ದಿವ್ಯಾಶ್ರೀ ಪೋಷಕರು ಆರೋಪಿದ್ದರು. ಈ ಸಂಬಂಧ ದಿವ್ಯಾಶ್ರೀ ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದು, ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಪಿಡಿಒ ಆನಂದ್ ಕಾಂಬ್ಳೆ ನನ್ನು ಪೊಲೀಸರು ಬಂಧಿಸಿದ್ದಾರೆ.ಸರ್ಕಾರಿ ನಿಯಮದ ಪ್ರಕಾರ ಪೊಲೀಸ್ ಬಂಧನದಲ್ಲಿ 48 ಗಂಟೆ ಕಳೆದ ಹಿನ್ನೆಲೆಯಲ್ಲಿ ಪಿಡಿಒ ಆನಂದ್ ಕಾಂಬ್ಳೆ ನನ್ನು ಅಮಾನತು ಪಡಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.